ಸುಳ್ಯ‌ ನಗರದ ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಪೌರಾಡಳಿತ ಸಚಿವರಿಗೆ ನ.ಪಂ.ಸದಸ್ಯ ಸಿದ್ದೀಕ್ ಕೊಕ್ಕೊ ಮನವಿ

0

ಸುಳ್ಯ‌ ನಗರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ನ.ಪಂ. ನಾಮನಿರ್ದೇಶಕ ಸದಸ್ಯ ಸಿದ್ದೀಕ್ ಕೊಕ್ಕೊ ರವರು ಪೌರಾಡಳಿತ ಸಚಿವರಾದ ರಹಿಮ್ ಖಾನ್ ರಿಗೆ ಮನವಿ ಸಲ್ಲಿಸಿದ್ದಾರೆ.

ಮನವಿ ಸ್ವೀಕರಿಸಿದ ಸಚಿವರು ಪೂರಕವಾಗಿ ಸ್ಪಂದನೆ ನೀಡಿದ್ದಾರೆ ಎಂದು ಸಿದ್ದೀಕ್ ಕೊಕ್ಕೊ ಸುದ್ದಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಹೀದ್ ತೆಕ್ಕಿಲ್, ನ.ಪಂ. ಸದಸ್ಯ ಶರೀಫ್ ಕಂಠಿ, ಸಂಪಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಇದ್ದರು.