ದೇವಚಳ್ಳ ಶಾಲಾ ಪೂರ್ವ ಪ್ರಾಥಮಿಕ ತರಗತಿಯ ಮೇಲುಸ್ತುವಾರಿ ಸಮಿತಿ ರಚನೆ

0

ಅಧ್ಯಕ್ಷರಾಗಿ ರಾಜೇಶ್ ಗುಡ್ಡೆಮನೆ ಆಯ್ಕೆ

ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭಗೊಂಡಿದ್ದು, ಇದರ ಮೇಲುಸ್ತುವಾರಿ ಸಮಿತಿಯನ್ನು ಜೂ.14ರಂದು ರಚಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎ‌ಂ.ಸಿ. ಅಧ್ಯಕ್ಷ ಜಯಾನಂದ ಪಟ್ಟೆ ವಹಿಸಿದ್ದರು.

ಪೂರ್ವ ಪ್ರಾಥಮಿಕ ತರಗತಿಯ ಮೇಲುಸ್ತುವಾರಿ ಸಮಿತಿಯ ನೂತನ‌ ಅಧ್ಯಕ್ಷರಾಗಿ ರಾಜೇಶ್ ಗುಡ್ಡೆಮನೆ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಎಲ್ ಕೆಜಿ ಯುಕೆಜಿ ತರಗತಿಯ ಶಿಕ್ಷಕಿ ಶ್ರೀಮತಿ ಲವಿತಾ ನೀರಬಿದಿರೆ ಆಯ್ಕೆಯಾದರು.

ಸದಸ್ಯರುಗಳಾಗಿ ಶೃತಿ ಗುಡ್ಡನಮನೆ, ದಯಾನಂದ ಕೆ., ಪವಿತ್ರ ದೊಡ್ಡತೋಟ, ಜಯಂತಿ ಬಾಜಿನಡ್ಕ, ಜಗತ್ ಗುಡ್ಡೆಮನೆ, ಅಕ್ಷತಾ ಸುಳ್ಳಿ, ನಂದಕುಮಾರ್, ಯಶೋದ ಪಟ್ಟೆ, ಸುಲೈಲಾ ಆಯ್ಕೆಯಾದರು.