ಕಾಂತಮಂಗಲ: ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ

0


ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ವಿರಾಜಪೇಟೆಯವರೆಂದು
ತಿಳಿದುಬಂದಿದೆ.
ಇಂದು ಬೆಳಿಗ್ಗೆ ಕಾಂತಮಂಗಲ ಶಾಲಾ ಬಳಿಯಲ್ಲಿ ತಲೆಗೆ ಕಲ್ಲು ಹೊತ್ತು ಹಾಕಿ ವ್ಯಕ್ತಿಯೊಬ್ಬರ ಕೊಲೆಗೀಡಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿ ತನಿಖೆ ಆರಂಭಿಸಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ತನಿಖೆ ನಡೆಸಿದಾಗ ಮೃತಪಟ್ಟ ವ್ಯಕ್ತಿ ವಿರಾಜಪೇಟೆಯ ವಸಂತ ಎಂದು ತಿಳಿದು ಬಂತು. ಆತ ಕಾಂತಮಂಗಲಕ್ಕೆ ಯಾಕೆ ಬಂದ ಮತ್ತು ಅಲ್ಲಿ ಶವವಾದ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.