ಮಿತ್ತಡ್ಕ: ಮನೆ ಮೇಲೆ ಮರ ಬಿದ್ದು ಅಪಾರ ಹಾನಿ

0

ಮರ ತೆರವುಗೊಳಿಸಿದ ಶಾಸ್ತಾವು ಯುವಕ ಮಂಡಲದ ಸದಸ್ಯರು

ಮರ್ಕಂಜ ಗ್ರಾಮದ ಮಿತ್ತಡ್ಕ ಹಿರಿಯ ಪ್ರಾಥಮಿಕ ಶಾಲಾ ಬಳಿಯ ಹೇಮಾವತಿ ಎಂಬವರ ಮನೆಗೆ ಇಂದು ಬೆಳಗ್ಗಿನ ಜಾವ ಮರ ಬಿದ್ದು ಮನೆಗೆ ಹಾಗೂ ಕೊಟ್ಟಿಗೆ ಹಾನಿಗೊಂಡಿದೆ. ಕೊಟ್ಟಿಗೆ ಸಂಪೂರ್ಣ ಹಾನಿಗೊಂಡಿದೆ.

ಮರ ಬಿದ್ದ ಬಗ್ಗೆ ಮಾಹಿತಿ ತಿಳಿದ ರೆಂಜಾಳ ಶಾಸ್ತಾವು ಯುವಕ ಮಂಡಲದ ಸದಸ್ಯರು ಊರವರ ಸಹಕಾರದೊಂದಿಗೆ ಮರ ತೆರವುಗೊಳಿಸಿ ಮನೆ ಹಾಗೂ ಕೊಟ್ಟಿಗೆಗೆ ತಾತ್ಕಾಲಿಕವಾಗಿ ಟಾರ್ಪಾಲ್ ಹೊದಿಸಿದರು.

ಸ್ಥಳಕ್ಕೆ ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗೀತಾ ಹೊಸೋಳಿಕೆ ಭೇಟಿ ನೀಡಿದರು.