ಬೆಲೆ ಏರಿಕೆಯ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ

0

ಅಂದು ಪ್ರತಿಭಟಿಸದ ಬಿಜೆಪಿಯವರು, ಇಂದು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ

ಕೇಂದ್ರ ಸರಕಾರ ಬೆಲೆ ಏರಿಸುವಾಗ ಎಲ್ಲಿಗೆ ಹೋಗಿದ್ದರು?

ಪ್ರತಿಕಾಗೋಷ್ಠಿಯಲ್ಲಿ ಎಂ.ವೆಂಕಪ್ಪ ಗೌಡ ಪ್ರಶ್ನೆ

ಕಳೆದ ೧೦ ವರ್ಷಗಳ ಕಾಲ ಬಿಜೆಪಿ ಸರಕಾರವು ಕೇಂದ್ರದಲ್ಲಿ ಆಡಳಿತ ನಡೆಸಿ ತೈಲ, ಗ್ಯಾಸ್ ಬೆಲೆಯೊಂದಿಗೆ ಇನ್ನಿತರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದ ಪ್ರತಿಭಟನೆ ಮಾಡದ ಬಿಜೆಪಿಗರು ಇಂದು ರಾಜ್ಯ ಸರಕಾರ ಪೆಟ್ರೋಲ್ ಬೆಲೆ ೩ ರೂ. ಏರಿದಾಗ ಪ್ರತಿಭಟನೆಗೆ ರಸ್ತೆಗಿಳಿದಿದ್ದಾರೆ. ಬಿಜೆಪಿಯವರು ಅಂದು ಎಲ್ಲಿಗೆ ಹೋಗಿದ್ದರು? ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಜೂ. ೨೨ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸಿದ್ದಾರೆ.

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿಯವರು ಇಂದು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿರುವುದು ಅವರು ಮಾಡುತ್ತಿರುವ ನಾಟಕದ ಒಂದು ಅಂಗವಾಗಿದೆ. ಇವರ ಈ ನಾಟಕವನ್ನು ಸಾರ್ವಜನಿಕರು ತಿಳಿದಿದ್ದಾರೆ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ಇವರು, ಇವರು ಮಾಡಿರುವ ಬೆಲೆ ಏರಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು. ೨೦೧೪ ರಲ್ಲಿ ೪೧೯ ರೂ. ಗ್ಯಾಸ್ ಬೆಲೆ ಇದ್ದು ಪೆಟ್ರೋಲ್ ಬೆಲೆ ೭೭.೬೫ ರೂ, ಡೀಸೆಲ್ ಗೆ ೬೧ ರೂ. ಇದ್ದು ಇದೀಗ ಇದರ ಬಗ್ಗೆ ಪ್ರಶ್ನಿಸದ ಇವರು ಬೆಲೆ ಏರಿಕೆಯದಾಗ ದೇಶಕ್ಕಾಗಿ ಸಹಿಸಿಕೊಳ್ಳುತ್ತೇವೆ ಎಂದು ಸರ್ಮಥಿಸಿಕೊಂಡಿದ್ದರು. ಇಂದು ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವೃದ್ಧಿಯ ದೃಷ್ಠಿಯಲ್ಲಿ ತೆರಿಗೆ ಮೂಲಕ ಪೆಟ್ರೋಲ್‌ಗೆ ೩ ರೂ ಹೆಚ್ಚಿಸಿದಾಗ ಕಾಂಗ್ರೆಸ್ ಸರಕಾರವನ್ನು ತೆಗಳುವುದಕ್ಕೋಸ್ಕರ ಈ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಉತ್ತಮ ಆಡಳಿತವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಬರುವುದಿಲ್ಲ ಎಂಬ ಹತಾಶೆಯಿಂದ ಜನರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.ಈ ವೇಳೆ ಅವರು ೨೦೧೨ರಿಂದ ೨೦೨೪ ರವರೆಗೆ ದೇಶದಲ್ಲಿ ಚಿನ್ನ, ಬೆಳ್ಳಿ, ಗೊಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಪಟ್ಟಿಯನ್ನು ತಂದು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಪ್ರಸ್ತುತ ಕೇಂದ್ರ ಸರ್ಕಾರವು ನೀಟ್ ಪರೀಕ್ಷೆ ಬರೆದ ಸುಮಾರು ೪೦ ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿ ಅದರಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ವ್ಯವಸ್ಥೆಯನ್ನು ಹಾಳು ಮಾಡಿರುವುದನ್ನು ನಾವು ಕಡಾಖಂಡಿತವಾಗಿ ಖಂಡಿಸುತ್ತಿದ್ದೇವೆ ಎಂದು ಹೇಳಿದರು. ಪ್ರತಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ, ಮುಖಂಡರುಗಳಾದ ನಂದರಾಜ್ ಸಂಕೇಶ್, ಭವಾನಿಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.