ಮಂಡೆಕೋಲು ಗ್ರಂಥಾಲಯ ನೂತನ ಕಟ್ಟಡಕ್ಕೆ ಸ್ಥಳಾಂತರ

0

ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯ ನೂತನ ಕಟ್ಟಡಕ್ಕೆ ಜೂ.26 ರಂದು ಸ್ಥಳಾಂತರ ಗೊಂಡಿದೆ.
ಬೆಳಗ್ಗೆ ಗಣಪತಿ ಹವನ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಉದ್ದಂತಡ್ಕ, ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸದಸ್ಯರಾದ ಗೀತಾಮಾವಂಜಿ, ಗ್ರಾಮ ಪಂಚಾಯತ್ ಪಿಡಿಓ ರಮೇಶ್ , ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷರು ಸುರೇಶ್ ಕಣೆಮರಡ್ಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರಜಿತ್ ಮಾವಂಜಿ ಭಾರತಿ ಉಗ್ರಾಣಿಮನೆ, ನಿವೃತ್ತ ಸೇನಾಧಿಕಾರಿ ರಘುಪತಿ ಉಗ್ರಾಣಿಮನೆ , ಮಂಡೆಕೋಲು ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕೇಶವಮೂರ್ತಿ ಹೆಬ್ಬಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಅನಂತಕೃಷ್ಣ ಚಾಕೋಟೆ , ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ,ಗ್ರಾಮ ಪಂಚಾಯತ್ ಸಿಬ್ಬಂದಿವರ್ಗ,ಕಂದಾಯ ಇಲಾಖೆ ಸಿಬ್ಬಂದಿಗಳು ,ಸಂಜೀವಿ ಸಂಘದ ಪದಾಧಿಕಾರಿಗಳು, ಅಂಚೆ ಇಲಾಖೆಯ ಸಿಬ್ಬಂದಿವರ್ಗ , ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಗ್ರಾಮಸ್ಥರು,ಹಿರಿಯರು ಪುಟಾಣಿ ಮಕ್ಕಳು, ಉಪಸ್ಥಿತರಿದ್ದರು.

ಉದಯ ಆಚಾರ್ ಕಲ್ಲಡ್ಕ , ಪ್ರಕಾಶ್ ಪೆರಾಜೆ ಪೂಜಾ ಕಾರ್ಯ ನೆರವೇರಿಸಿದರು.