ನಡುಗಲ್ಲು ಶಾಲಾ ಮಂತ್ರಿ ಮಂಡಲ ರಚನೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ ಶಾಲಾ ಸಂಸತ್ತು ಚುನಾವಣೆ ಮೂಲಕ ನಡೆಯಿತು.
ಮುಖ್ಯಮಂತ್ರಿಯಾಗಿ ಅಮೃತ ಆಯ್ಕೆಯಾದರೆ, ಉಪಮುಖ್ಯಮಂತ್ರಿಯಾಗಿ ಕು! ರಕ್ಷ ಪಿ.ಎಸ್ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಚೈತನ್ಯ ಹಾಗೂ ಹೇಮಂತ್, ಆರೋಗ್ಯ ಮಂತ್ರಿಯಾಗಿ ರತಿಕ ಹಾಗೂ ಚಾರ್ವಿ, ಸ್ವಚ್ಛತಾ ಮಂತ್ರಿಯಾಗಿ ಉದ್ವಿತ ಹಾಗೂ ಪೂರ್ವಿಕ್, ವಾರ್ತಾ ಮಂತ್ರಿಯಾಗಿ ಚಾರ್ವಿ ಹಾಗೂ ತುಶಾಂತ್, ಸಾಂಸ್ಕೃತಿಕ ಮಂತ್ರಿಯಾಗಿ ದೃತಿ ಹಾಗೂ ವಚನ, ಕ್ರೀಡಾ ಮಂತ್ರಿಯಾಗಿ ನಿಖಿಲ್ ಹಾಗೂ ಯಕ್ಷಿತಾ, ಆಹಾರ ಮಂತ್ರಿಯಾಗಿ ಶ್ರೇಯ ಮತ್ತು ಪೂರ್ವಿತ್, ತೋಟಗಾರಿಕಾ ಮಂತ್ರಿಯಾಗಿ ವೇದಾಂತ್ ಹಾಗೂ ಮೋಹಿತ್, ಶಿಸ್ತುಪಾಲನ ಮಂತ್ರಿಯಾಗಿ ತನುವಿ ಮತ್ತು ಪ್ರೀತಮ್ , ನೀರಾವರಿ ಮಂತ್ರಿಯಾಗಿ ಗೌತಮ್ ಮತ್ತು ದ್ರುವಿನ್ ಆಯ್ಕೆಯಾದರು. ಸಮಗ್ರ ಶಾಲಾ ಸಂಸತ್ತು ರಚನೆಯಾದ ಬಳಿಕ. ಶಾಲಾ ಮುಖ್ಯ ಶಿಕ್ಷಕರು ಪ್ರಮಾಣವಚನ ಬೋಧಿಸಿದರು. ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಪಾರೆಪ್ಪಾ ಡಿ ಮಾರ್ಗದರ್ಶನದಲ್ಲಿ, ಚುನಾವಣಾ ಅಧಿಕಾರಿಗಳಾಗಿ, ಶಿಕ್ಷಕರುಗಳಾದ ಮಹೇಶ್ ಕೆ.ಕೆ, ಶ್ರೀಮತಿ ಸುಮನ, ಶ್ರೀಮತಿ ಮೋಕ್ಷ ಸಹಕರಿಸಿದರು.