ದೇವರಕಾನ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ

0

ಜಲಧಿ ಇವೆಂಟ್ಸ್ ಪೆರುವಾಜೆ ಇದರ ವತಿಯಿಂದ ಐವರ್ನಾಡು ಗ್ರಾಮದ ದೇವರಕಾನ ಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಲೇಖನ ಸಾಮಾಗ್ರಿ ಹಾಗೂ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಜೂನ್ 26ರಂದು ನಡೆಯಿತು. ಸಂಸ್ಥೆಯ ಮಾಲಕರಾದ ರಕ್ಷಿತ್ ಪೆರುವಾಜೆ, ಇವರು 5,000ರೂ ಮೌಲ್ಯದ ನೋಟ್ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಸರಕಾರಿ ಶಾಲೆಗೆ ಸತತ ಎರಡನೇ ವರ್ಷದ ಈ ಕೊಡುಗೆ ಬಗ್ಗೆ ರಕ್ಷಿತ್ ಪೆರುವಾಜೆಯವರು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಮಮತಾ ಎಡಮಲೆ,ಶಾಲಾ ಉಸ್ತುವಾರಿ ಹಾಗೂ ಗುಣಮಟ್ಟ ಸಮಿತಿಯ ಸದಸ್ಯರಾಗಿರುವ ನವೀನ್ ಕುಮಾರ್ ಸಾರಕರೆಯವರು ಮತ್ತು ಪವನ್ ಕುಮಾರ್ ರವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳಾದ ಪ್ರಮೀಳಾರವರು ಸ್ವಾಗತಿಸಿ, ಶಾಲಾ ನಾಯಕಿ ಹಂಷಿಣಿಯವರು ವಂದಿಸಿದರು. ಸಹ ಶಿಕ್ಷಕರಾದ ಸೌಮ್ಯ ಬಿ ಕೆ, ಅತಿಥಿ ಶಿಕ್ಷಕರಾದ ಗಾಯತ್ರಿ ಡಿ ಮತ್ತು, ದೀಪ್ತಿ ಸಿ ಕೆ ಯವರು ಸಹಕರಿಸಿದರು.