ಇ.ವಿ. ದೇವಿ ಬಾಲನ್ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ

0

ದ.ಕ. ಸಂಪಾಜೆ ಗ್ರಾಮದ ಪಿಡಬ್ಲ್ಯೂಡಿ ಗುತ್ತಿಗೆದಾರ ವಿ.ವಿ. ಬಾಲನ್ ಅವರ ಧರ್ಮಪತ್ನಿ ಇ.ವಿ. ದೇವಿ ಬಾಲನ್ ಅವರ ವೈಕುಂಠ ಸಮಾರಾಧನೆ ಹಾಗೂ ನುಡಿನಮನ ಸಲ್ಲಿಕೆ ಕಾರ್ಯಕ್ರಮವು ಜೂ.24ರಂದು ಕಣ್ಣೂರಿನ ವಲಿಯಾವೀಡು ಮನೆಯಲ್ಲಿ ಜರುಗಿತು.

ಸಂಪಾಜೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ವಾಸುದೇವ, ಕಟ್ಟೆಮನೆ, ಸ್ಥಳೀಯರಾದ ವರುಣ್ ಕೃಣ್ಣ, ದಾಮೋದರ ಪಿ. ಅವರು ಇ.ವಿ. ದೇವಿ ಬಾಲನ್ ಅವರ ಕುರಿತು ಮಾತನಾಡಿ, ನುಡಿನಮನ ಸಲ್ಲಿಸಿದರು.

ಸಂಪಾಜೆ ಲಯನ್ಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ, ಕಲ್ಲುಗುಂಡಿ ವರ್ತಕರ ಸಂಘದ ಪದಾಧಿಕಾರಿಗಳು, ಸುಳ್ಯ ತಾಲೂಕು ಯಾದವ ಸಭಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಸಂಪಾಜೆಯ ಸ್ಥಳೀಯ ನಿವಾಸಿಗಳು ವೈಕುಂಠ ಸಮಾರಾಧನೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ವಿ.ವಿ. ಬಾಲನ್, ಪುತ್ರರಾದ ಪ್ರಶಾಂತ್, ಪ್ರಸೀದ್, ಪುತ್ರಿ ಪ್ರಶೀತಾ, ಸೊಸೆಯಂದಿರಾದ ಶ್ರೀಮತಿ ದೀಪ್ತಿ, ಶ್ರೀಮತಿ ರಚನಾ, ಅಳಿಯ ಮಧುಸೂದನ, ಮೊಮ್ಮಕ್ಕಳು , ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ದೇವಿ ಬಾಲನ್ ಸ್ಮರಣಾರ್ಥ ಧನಸಹಾಯ ಹಸ್ತಾಂತರ

ವಿ.ವಿ. ಬಾಲನ್ ಅವರು ಪತ್ನಿ ದೇವಿಬಾಲನ್ ಅವರ ಸ್ಮರಣಾರ್ಥ ಪಯ್ಯನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಟ್ರಸ್ಟೊಂದಕ್ಕೆ ಧನಸಹಾಯ ಹಸ್ತಾಂತರಿಸಿದರು.