ಷೋಡಷಾವಧಾನದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಅನ್ವೇಶ್ ಅಂಬೆಕಲ್ಲು

0

ಹದಿನಾರು ವಿಷಯಗಳನ್ನು ಏಕಕಾಲಕ್ಕೆ ಗಮನಿಸಿ ,ಸ್ಮರಣಶಕ್ತಿಯೊಳಗೆ ದಾಖಲಿಸಿಕೊಂಡು, ಪ್ರದರ್ಶನ ನೀಡುವ ಮೂಲಕ ಮಂಗಳೂರು ಸ್ವರೂಪ ಅಧ್ಯಯನ ಕೇಂದ್ರದ ಅನ್ವೇಶ್ ಅಂಬೆಕಲ್ಲು ಹೊಸ ದಾಖಲೆ ಬರೆದಿದ್ದಾರೆ.

ನೆನಪಿನ ತಂತ್ರಗಳ ಮೂಲಕ ಮಕ್ಕಳಲ್ಲಿರುವ ಅಗಾಧ ಸಾಮರ್ಥ್ಯವನ್ನು ಪರಿಚಯಿಸುವ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್ ಅವರ ಮಾರ್ಗದರ್ಶನದಲ್ಲಿ ಈ ದಾಖಲೆಯು ಬರೆಯಲ್ಪಟ್ಟಿತು.

ಪುಸ್ತಕದ ಹೆಸರುಗಳು, ಪ್ರಶ್ನೆಗಳು, ಸಂಖ್ಯೆಗಳು, ವಸ್ತುಗಳ ಹೆಸರು, ಚಿತ್ರಗಳ ಹೆಸರು,ಹಾಡುಗಳ ಹೆಸರು, ಘಂಟೆ ಶಬ್ದ, ಕ್ರಿಯೇಟಿವ್ ಆರ್ಟ್ ಹೀಗೆ ಇನ್ನೂ ಹಲವು ವಿಚಾರಗಳ ಜೊತೆಗೆ ರೂಬಿಕ್ಸ್ ಕ್ಯೂಬ್ ಪರಿಹರಿಸಿಕೊಂಡು ಕಾಳುಗಳನ್ನು ಎಣಿಸುತ್ತಾ ,16 ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.

ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ 1 ರಿಂದ 7 ನೆಯ ತರಗತಿ ಅಭ್ಯಾಸವನ್ನು ಪೂರ್ಣಗೊಳಿಸಿ ಪ್ರಸ್ತುತ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ 9 ನೆಯ ತರಗತಿ ವ್ಯಾಸಂಗ ಮಾಡುತ್ತಿದ್ದು ಪಠ್ಯಪುಸ್ತಕಗಳ ಕಲಿಕೆಯೊಂದಿಗೆ ವಿಶೇಷ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಅನ್ವೇಶ್ ,ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಹಾಗೂ ವಯೋಲಿನ್ ಅಭ್ಯಾಸ ನಡೆಸುತ್ತಿರುವ ಜೊತೆಗೆ ಚಿತ್ರಕಲೆ,ಮಿಮಿಕ್ರಿ,ಬೀಟ್ ಬಾಕ್ಸ್ ನಲ್ಲಿಯೂ ವಿಶೇಷವಾಗಿ ಅಭ್ಯಾಸ ಮಾಡುತ್ತಿದ್ದು ಉದಯೋನ್ಮುಖ ಪ್ರತಿಭೆಯಾಗಿ ತೆರೆದುಕೊಳ್ಳುತ್ತಿದ್ದಾರೆ.

ಮೂಲತಃ ಸುಳ್ಯದವರಾಗಿದ್ದು ಪ್ರಸ್ತುತ ಮೆಲ್ಕಾರ್ ನಲ್ಲಿ ವಾಸವಿರುವ ಇಂಜಿನಿಯರ್ ಮಧುಸೂದನ್ ಅಂಬೆಕಲ್ಲು ಹಾಗೂ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರನಾಗಿರುವ ಅನ್ವೇಶ್ ಅಂಬೆಕಲ್ಲು ಇನ್ನಷ್ಟು ಸಾಧನೆಗಳ ನ್ನು ಮಾಡುವ ಸಿದ್ಧತೆಯಲ್ಲಿದ್ದಾನೆ.

ಮಕ್ಕಳಿಗೆ ಬೆಳೆಯುವ ಹಾದಿಯನ್ನು ತೋರಿಸಿಕೊಡುತ್ತಿರುವ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ಹಾಗೂ ಆದಿ ಸ್ವರೂಪ ಈ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.