ಬೆಳ್ಳಾರೆ ಕೆಪಿಎಸ್ ನ ಶಿಕ್ಷಕ ರಾಮಚಂದ್ರ ಭಟ್ ಮುಗುಳಿಯವರಿಗೆ ಗೌರವ ಸನ್ಮಾನ ಹಾಗೂ ವಿದಾಯ ಸಮಾರಂಭ

0

ರಾಮಚಂದ್ರ ಭಟ್ ರವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ : ಭಾಗೀರಥಿ ಮುರುಳ್ಯ

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ಗಣಿತ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಜೂ.30 ರಂದು ಸೇವಾ ನಿವೃತ್ತಿಗೊಳ್ಳಲಿರುವ ಶಿಕ್ಷಕ ರಾಮಚಂದ್ರ ಭಟ್ ಮುಗುಳಿಯವರಿಗೆ ಗೌರವ ಸನ್ಮಾನ ಹಾಗೂ ವಿದಾಯ ಸಮಾರಂಭವು ಜೂ.29 ರಂದು ಕೆಪಿಎಸ್ ನ ನಾರಾಯಣ ಶೇಖ ಸಭಾಭವನದಲ್ಲಿ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕ ರಾಮಚಂದ್ರ ಭಟ್ ರವರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಗುಣಮಟ್ಟದ ಶಿಕ್ಷಣ ವನ್ನು ನೀಡುವ ಮುಖಾಂತರ ವಿದ್ಯಾರ್ಥಿಗಳ ಸಾಧನೆಗೆ ಕಾರಣರಾಗಿದ್ದಾರೆ.


ವಿದ್ಯಾರ್ಥಿಗಳು ಗುರುಗಳ ನೆನಪನ್ನು ಸದಾ ಇಟ್ಟುಕೊಳ್ಳಬೇಕು.ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ರಾಮಚಂದ್ರ ಭಟ್ ರವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಉಜಿರೆ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಭಟ್ ರವರು ರಾಮಚಂದ್ರ ಭಟ್ ರವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಉಂಗುರ ತೊಡಿಸಿ ಸನ್ಮಾನಿಸಿದರು.
ಶಿಕ್ಷಣ ಇಲಾಖೆ,ಕಾಲೇಜು ವಿಭಾಗ,ಬಿಸಿಯೂಟ ಅಡುಗೆ ಸಿಬ್ಬಂದಿಗಳು,ಸರಕಾರಿ ಇಲಾಖೆ,ಎನ್.ಸಿ.ಸಿ.ಕೆಡೆಟ್ ಗಳು, ಸಂಘ ಸಂಸ್ಥೆಗಳ ವತಿಯಿಂದ ಹಾಗೂ ಹಲವು ಜನ ಗಣ್ಯರು ಸನ್ಮಾನಿಸಿದರು.


ಬೆಳಾಲು ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಅಭಿನಂದನಾ ಮಾತು ಆಡಿದರು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್.ಮನ್ಮಥ, ಶ್ರೀಮತಿ ರಾಜೀವಿ ಆರ್.ರೈ,ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ , ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಕಾಲೇಜಿನ ಪ್ರಾಂಶುಪಾಲ ಜನಾರ್ದನ ಕೆ.ಎನ್.,ಉಪಪ್ರಾಂಶುಪಾಲೆ ಉಮಾ ಕುಮಾರಿ,ಪ್ರಾಥಮಿಕ ಶಾಲಾ ಮುಖ್ಯ ಗುರು ಮಾಯಿಲಪ್ಪ, ಎಸ್.ಡಿ.ಎಂ.ಸಿ.ಕಾರ್ಯಾಧ್ಯಕ್ಷ ಶ್ರೀನಾಥ ರೈ ಬಾಳಿಲ,ಕಟ್ಟಡ ಸಮಿತಿ‌ ಅಧ್ಯಕ್ಷ ಹರ್ಷ ಜೋಗಿಬೆಟ್ಟು, ಪುರಂದರ ಭಟ್,ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಪನ್ನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶರಧಿ ಮತ್ತು ಬಳಗದವರು ಪ್ರಾರ್ಥಿಸಿ, ಗಂಗಾಧರ ರೈ ಸ್ವಾಗತಿಸಿ,ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿ,ಉಮಾ ಕುಮಾರಿ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕಿ ಮಿಯಾಗೆ ವಂದಿಸಿದರು.