ಸುಳ್ಯ ಶ್ರೀ ಭಗವತಿ ಯುವ ಸೇವಾ ಸಂಘ ಬೂಡು-ಕೇರ್ಪಳ – ಕುರುಂಜಿಗುಡ್ಡೆ ಮಹಾಸಭೆ

0

ಅಧ್ಯಕ್ಷರಾಗಿ ಸುನಿಲ್ ಕೇರ್ಪಳ, ಕಾರ್ಯದರ್ಶಿಯಾಗಿ ರಾಜೇಶ್ ಕುರುಂಜಿಗುಡ್ಡೆ ಆಯ್ಕೆ

ಸುಳ್ಯ ಶ್ರೀ ಭಗವತಿ ಯುವ ಸೇವಾ ಸಂಘ ಬೂಡು-ಕೇರ್ಪಳ-ಕುರುಂಜಿಗುಡ್ಡೆ ಮಹಾಸಭೆಯು ಪನ್ನೆಬೀಡು ಶ್ರೀ ಭಗವತಿ ದೇವಸ್ಥಾನದಲ್ಲಿ
ಜೂ.30ರಂದು ಮಹಾ ಸಭೆಯು ನಡೆಯಿತು. ಸಂಘದ
ನೂತನ ಅಧ್ಯಕ್ಷರಾಗಿ ಸುನಿಲ್ ಕೇರ್ಪಳ, ಕಾರ್ಯದರ್ಶಿಯಾಗಿ ರಾಜೇಶ್ ಕುರುಂಜಿಗುಡ್ಡೆ ಆಯ್ಕೆ ಮಾಡಲಾಯಿತು.


ಸಂಘದ ನಿರ್ಗಮಿತ ಕಾರ್ಯದರ್ಶಿ ವಾಸುದೇವ ನಾಯಕ್ ಸ್ವಾಗತಿಸಿದರು. ಸಂಘದ ನಿರ್ಗಮಿತ ಅಧ್ಯಕ್ಷರು ಕಳೆದ ಅವಧಿಯ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಖಜಾಂಜಿಗಳಾದ ಮಹಾಬಲ ರೈ ಬೂಡು ಇವರು ಲೆಕ್ಕಪತ್ರಗಳನ್ನು ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಬೂಡು ರಾಧಾಕೃಷ್ಣ ರೈ, ನೂತನ ಅಧ್ಯಕ್ಷರಾಗಿ ಸುನಿಲ್ ಕೇರ್ಪಳ, ಕಾರ್ಯದರ್ಶಿಯಾಗಿ ರಾಜೇಶ್ ಕುರುಂಜಿಗುಡ್ಡೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ರೈ ಬೂಡು, ಖಜಾಂಜಿಯಾಗಿ ಮಹಾಬಲ ರೈ, ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ ಕಾಳ್ಯಾಂಗಾಡ್, ಲಕ್ಷ್ಮಣ ಕೇರ್ಪಳ, ಜತೆಕಾರ್ಯದರ್ಶಿಗಳಾಗಿ ಕುಸುಮಾಧರ ರೈ ಬೂಡು, ವಿಜಯ್ ಕುಮಾರ್ ಕುರುಂಜಿಗುಡ್ಡೆ, ಕ್ರೀಡಾ ಕಾರ್ಯದರ್ಶಿಯಾಗಿ ಸೀತಾರಾಮ ಕುದ್ಪಾಜೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಶೆಟ್ಟಿ ಬೂಡು, ಗೌರವ ಸಲಹೆಗಾರರಾಗಿ ಶಿವರಾಮ ಕೇರ್ಪಳ (ಕೆ.ವಿ.ಜಿ.ಪಿ.), ಆನಂದ ಖಂಡಿಗೆ, ಗೋಪಾಲ ಎಸ್. ನಡುಬೈಲು, ಮೋನಪ್ಪ ಪೂಜಾರಿ, ವಿಠಲ ರೈ ಬೂಡು, ಬೀರಣ್ಣ ಗೌಡ ಆಯ್ಕೆಯಾದರು. 2024-25ನೇ ಸಾಲಿನಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ, ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಚರಿಸುವುದಾಗಿ ತೀರ್ಮಾನಿಸಲಾಯಿತು. 2024-25ನೇ ವರ್ಷವು ಸಂಘದ ಬೆಳ್ಳಿ ಹಬ್ಬದ ವರ್ಷವಾಗಿದ್ದು ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಎಂದು ಸರ್ವಾನುಮತದಿಂದ ತಿರ್ಮಾನಿಸಲಾಯಿತು. ಗೌರವಾಧ್ಯಕ್ಷರಾದ ಬೂಡು ರಾಧಕೃಷ್ಣ ರೈಯವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಕುಸುಮಾಧರ ರೈ ಬುಡು ವಂದಿಸಿದರು.