ವೈದ್ಯೋ ನಾರಾಯನೋ ಹರಿ

0

ಲೇಖನ : ರಶ್ಮಿ ಗೌಡ ಪೀಚೆ ಮನೆ ಪೆರಾಜೆ

ಕಾಯಿಲೆಯೇ ಎಂಬ ರಾಕ್ಷಸ ನಕ್ಕಾಗ ಅವನ ಜೊತೆ ಹೋರಾಡಿ ಮತ್ತೆ ನಮ್ಮ ಬದುಕಿನಲ್ಲಿ ನಗು ತುಂಬುವ ಕಾಣುವ ದೇವರು ಎಂದರೆ ವ್ಯೆದ್ಯ ಎನ್ನುವುದೇ ನನ್ನ ಲೇಖನದ ಕೇಂಧ್ರಬಿಂದುವಿನ ಅರ್ಥ…..


ನಾನು ಒಬ್ಬಳು ನರ್ಸ್ ಆಗಿ ನಾನು ಕಂಡ ಹಾಗೆ.. ವೈದರು ಎನ್ನುವುದು ಆಸ್ಪತ್ರೆಯ ಹೃದಯವಿದ್ದಂತೆ.. ತಾಳ್ಮೆಯ ಸಹನಮೂರ್ತಿ , ತಿಳುವಳಿಕೆಯ ಜ್ಞಾನ ಬಂಡಾರ,ಜೀವದ ಹಂಗು ತೊರೆದು, ನಿದ್ದೆ, ಊಟ, ವಿಶ್ರಾಂತಿ ಎನ್ನದೇ.. ವಿಶೇಷ ಪಾತ್ರದಲ್ಲಿ ಹಗಲಿರುಳು ಶ್ರಮಿಸುವ ಜೀವವೇ ವೈದ್ಯರು. ಇವರಿಗೆ ನನ್ನ ಮನದಾಳದ ವೈದ್ಯರ ದಿನದ ಶುಭಾಶಯಗಳು.
ದೇವರ ಬಳಿಕ ಒಬ್ಬ ರೋಗಿಯನ್ನು ಗುಣಮುಖರನ್ನಾಗಿ ಮಾಡುವ ಶಕ್ತಿ ಹೊಂದಿರುವ ಏಕೈಕ ವ್ಯಕ್ತಿ ಅಂದರೇ ಅದು ವೈದ್ಯ ಲೋಕ.ದೇವರು ಎಲ್ಲಾ ಕಡೆ ಇರಲು ಸಾದ್ಯವಾಗದೆ ಇದ್ದಾಗ ವೈದ್ಯರನ್ನು ನೀಡಿದ ಎಂದು ಹೇಳಲಾಗುತ್ತದೆ. ಇದು ಎಲ್ಲಾ ಕಾಲಕ್ಕೆ ಅಕ್ಷರಸಂ ನಿಜವಾದ ಮಾತು.
ನಮ್ಮ ಭರತ ಭೂಮಿಯಲ್ಲಿ ನಮ್ಮ ದೇಶದ ಗಡಿಯನ್ನು ಕಾಯುವ ಸೈನಿಕ.. ದೇಶದ ಬೆನ್ನುಎಲುಬು ಆಗಿರುವ ರೈತ.. ಇವರ ಜೊತೆ ದೇವರ ಪ್ರತಿರೂಪ ಆಗಿರುವ ವೈದ್ಯಲೋಕ ನಮ್ಮ ಭರತ ಭೂಮಿಯ ಪುಣ್ಯ ಆಸ್ತಿಗಳು..
ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಸಮಾಜದಲ್ಲಿ ವೈದರಿಗೆ ಗೌರಯುತ ಸ್ಥಾನವಿದೆ. ಇಂದಿನ ವಿಜ್ಞಾನದ ತಾಂತ್ರಿಕ ಯುಗದಲ್ಲಿ ರೋಗಿಯ ಸಾವು ನೋವಿನ ಅಂತಿಮ ಪಯಣದಲ್ಲಿ ಹೋರಾಟ ಮಾಡಿ, ರೋಗಿಯ ಜೀವ ಉಳಿಸಿಕೊಳ್ಳುವ ಪರಿ ನಿಜಕ್ಕೂ ಅತ್ಯದ್ಭುತ.
ಒಬ್ಬ ನಡಿಯುವ ರೋಗಿಯಿಂದ ಹಿಡಿದು ತೇವಳುವ ರೋಗಿಯವರೆಗೂ ಯಾವುದೇ ಅಸಹ್ಯ ಪಟ್ಟುಕೊಳ್ಳದೇ, ತನ್ನ ಸ್ವಂತ ಹೆತ್ತ ತಾಯಿಯೋ ತಂಧೆಯೋ, ಸಹೋದರ ಸಹೋದರಿ ಅನ್ನುವಂತೆ ಆರೈಕೆ ಮಾಡುವ ಪರಿ ಮಾನವೀತೆಯನ್ನು ಬಿಂಬಿಸುತ್ತದೆ.


ಚಿಂತೆ, ಆಲೋಚನೆ, ನೋವು ಇಲ್ಲದ ವ್ಯಕ್ತಿ ಈ ಭೂಮಿ ಮೇಲೆ ಇರಲು ಸಾಧ್ಯವಿಲ್ಲ, ಇಂತಹ ನಿಸರ್ಗ ನಿಯಮ ದ ಸ್ವಭಾವದಲ್ಲಿ ವೈದ್ಯ ಲೋಕದ ವೈದ್ಯರು ಒಬ್ಬರು, ತಮ್ಮ ಚಿಂತೆ, ಆಲೋಚನೆ ಯನ್ನು ಬದಿಗಿಟ್ಟು ರೋಗಿಯನ್ನು ನೋಡಿದಾಗ ನಗುಮುಖದಿಂದ ಮಾತನಾಡುತ್ತಾ, ಪ್ರೀತಿಯ ಮಾತುಗಳಿಂದ ರೋಗಿಯ ಆತ್ಮಸ್ಥರ್ಯವನ್ನು ಹೆಚ್ಚಿಸುತ್ತಾರೆ. ಪ್ರೀತಿ ತುಂಬಿದ ಮಾತುಗಳಿಂದ ರೋಗಿಗಳಲ್ಲಿ ಆಪ್ತ ಸಂಜೀವಿನಿಯಂತೆ, ಸ್ನೇಹಿತನಂತೆ ಕಂಡು ಬರುತ್ತಾರೆ.ಸಂಕಷ್ಟದ ಸಮಯದಲ್ಲಿ ಪುಟ್ಟಿದೆಳುವ ಮತ್ತು ಉಪಾಶಮಾನಕಾರಿಯಾಗಿ ಕಾರ್ಯನಿರ್ವಾಹಿಸಿದ ಕೈಗಳನ್ನು ಸ್ಮರಿಸಿದಕ್ಕೆ ಒಂದು ಅದ್ಭುತ ಉದಾಹರಣೆ, ಜಾಗತಿಕ ಪಿಡುಗು ಕೋರೋನಾ ವೈರಸ್. ಇಡೀ ವಿಶ್ವವೇ ಕಂಗಲಾಗಿರುವ ಸಂದರ್ಭರದಲ್ಲಿ ಎಲ್ಲರ ಪಾಲಿಗೆ ದೇವರಾಗಿ ಕಂಡಿರೋದೋ ವೈದ್ಯಾ ಲೋಕದ ವೈದ್ಯರು.

ರೋಗಿ ಮತ್ತು ವೈದ್ಯರ ಸಂಬಂಧ ವಿಶೇಷವಾದದ್ದು, ರೋಗಿಗೆ ಚಿಕ್ಕಿತ್ಸೆ ನೀಡುವದರ ಜೊತೆ ಜೊತೆಗೆ, ತೊಂದರೆಗಳನ್ನು ಆಲಿಸುವ ಕಿವಿ,ಬರವಸೆಯನ್ನು ಮೂಡಿಸುವ ಮಾತು,ನೋವಿನಲ್ಲಿ ಸಾಥ್ ನೀಡುವ ಕೈ, ತಾಳಮಳವನ್ನು ಅರ್ಥಮಾಡ್ಕೊಳ್ಳುವ ಹೃದಯ, ನೋವು ಮರೆಸುವ ತಿಳಿಹಾಸ್ಯ – ವೈದ್ಯ ಇವೆಲ್ಲವನ್ನೂ ನೀಡಿ ರೋಗಿ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುವ ಪರಿ ವಿಷೇಶ.ಒಬ್ಬ ರೋಗಿಯನ್ನು ಸಾವಿನ ದವಡೆಯಿಂದ ಹೊರಬಂದಾಗ, ಶಸ್ತ್ರಚಿಕಿತ್ಸೆ ಸಪಲವಾದಗ, ಒಂದು ಜೀವವನ್ನು ಭೂಮಿಗೆ ತಂದಾಗ ಅವರ ದೀರ್ಘ ಕಾಲದ ತ್ಯಾಗದ ಸಂಕೇತ ಪ್ರತಿಫಲ ಆಗಿರುತ್ತದೆ.
ಎಲ್ಲ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಲೋಕದಲ್ಲಿಯೂ ಲೋಪದೋಷಗಳು, ಅಧರ್ಮದ ದಾರಿ ಹಿಡಿದವರು ಇರಬಹುದು, ಹಾಗಂತ ಇಡೀ ವೈದ್ಯಕೀಯ ಸಮೂಹವನ್ನು ದೂರುವುದು ಸಮಂಜಸವಲ್ಲ.


ತಮ್ಮ ಜೀವನವನ್ನು ಲೆಕ್ಕಿಸದೆ, ಸೈನಿಕನ ಹಾಗೆ ಕಾರ್ಯ ನಿರ್ವಹಿಸುವ ವೈದ್ಯರಿಗೊಂದು ಸಲಾಂ..ಸೈನಿಕರು ಗಡಿಯನ್ನು ಕಾಯುತ್ತಿದರೆ, ವೈದ್ಯರು ಪ್ರತಿಯೊಬ್ಬರ ಆರೋಗ್ಯ ಇವನ್ನು ಕಾಪಾಡುತ್ತಾರೆ…