ಕೋಲ್ಚಾರು: ಕುಂಭಕೋಡು ಬಳಿ ಕಾರು ಮತ್ತು ಬೈಕ್ ಅಪಘಾತ- ಸವಾರನಿಗೆ ಗಾಯ

0

ಸುಳ್ಯ ಕಡೆಯಿಂದ
ನಾರ್ಕೋಡು ಮಾರ್ಗವಾಗಿ ಕೋಲ್ಚಾರಿಗೆ ಸಂಚರಿಸುತ್ತಿದ್ದ ಬೈಕಿಗೆ ಕುಂಭಕೋಡು ತಿರುವಿನಲ್ಲಿ ಕಾರು ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.
ಬೈಕ್ ಸವಾರ ಕೋಲ್ಚಾರಿನಲ್ಲಿ ಶೇಂದಿ ಅಂಗಡಿ ನಡೆಸುತ್ತಿದ್ದು, ಸುಳ್ಯದಿಂದ ಕೋಲ್ಚಾರಿಗೆ ಹೋಗುತ್ತಿದ್ದಾಗ ಕುಂಭಕೋಡು ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಕಾರಿನ ಎದುರು ಭಾಗಕ್ಕೆ ಡಿಕ್ಕಿ ಹೊಡೆಯಿತು.

ಪರಿಣಾಮವಾಗಿ ಬೈಕ್ ಸವಾರ ಎಸೆಯಲ್ಪಟ್ಟು ತಲೆಗೆ ಮತ್ತು ಮುಖದ ಭಾಗಕ್ಕೆ ಗಾಯವಾಗಿದ್ದು ಅವರನ್ನು ಸ್ಥಳೀಯರು ಸೇರಿ ಕೋಲ್ಚಾರಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆಯನ್ನು ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರಿನ ಗ್ಲಾಸ್ ಹುಡಿಯಾಗಿದ್ದು, ಎರಡು ವಾಹನಗಳು ಜಖಂಗೊಂಡಿದೆ.