ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಮುಖ್ಯಪೇಟೆಯಲ್ಲಿರುವ ನಂದಿನಿ ಹೌಸ್ ನಲ್ಲಿ ಮಡಿಕೇರಿಯ ಅಂಬಿಕಾ ವೈಭವ ಅವರ ಮೂರನೇ ಸಂಸ್ಥೆಯಾಗಿ ಹೋಟೆಲ್ ಶ್ರೀ ಅಂಬಿಕಾ ವೈಭವ ಫೆ.7ರಂದು ಬೆಳಿಗ್ಗೆ ಶುಭಾರಂಭಗೊಂಡಿತು.















ಹೋಟೆಲ್ ಶುಭಾರಂಭದ ಪ್ರಯುಕ್ತ ಫೆ.6 ರಾತ್ರಿ ದುರ್ಗಾಪೂಜೆ ಹಾಗೂ ಸುದರ್ಶನಹೋಮ ಜರುಗಿತು. ಫೆ.7ರಂದು ಬೆಳಿಗ್ಗೆ ಗಣಪತಿ ಹವನ ಹಾಗೂ ಲಕ್ಷ್ಮೀಪೂಜೆ ನಡೆಯಿತು.
ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ, ವರ್ತಕರ ಸಂಘದ ಉಪಾಧ್ಯಕ್ಷ ಕೆ.ಎಂ. ಅಶ್ರಫ್, ಸಚಿತ್ ಕುಮಾರ್ ರೈ ಬಾಲಂಬಿ ದಂಪತಿಗಳು, ಶಂಕರ ಪ್ರಸಾದ್ ರೈ ದಂಪತಿಗಳು, ಗ್ರಾ.ಪಂ. ಸದಸ್ಯರಾದ ಜಗದೀಶ್ ರೈ, ಜಿ.ಕೆ. ಹಮೀದ್, ಎಸ್.ಪಿ. ಶಾಮಿಯಾನ ಮಾಲಕ ಎಸ್.ಪಿ. ಲೋಕನಾಥ್, ಕಿಶೋರ್ ಕುಮಾರ್ ಪನೇಡ್ಕ, ಸ್ಪಾಟ್ ಕಂಪ್ಯೂಟರ್ ಕಿಶೋರ್, ಶಿವರಾಮ ಬಾಲಂಬಿ, ಪ್ರಶಾಂತ್ ಇ.ವಿ., ಆಲಿ ಹಾಜಿ, ಕಟ್ಟಡ ಮಾಲಕರಾದ ನಿತ್ಯಾನಂದ ರೈ, ಸಚ್ಚಿದಾನಂದ ರೈ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.










