














ನಾಲ್ಕೂರು ಗ್ರಾಮದ ಉತ್ರಂಬೆಯಲ್ಲಿರುವ ಶ್ರೀ ಅರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಸ್ಥಾನದಲ್ಲಿ ಪ್ರತಿಷ್ಠಾನ ವಾರ್ಷಿಕೋತ್ಸವವು ಫೆ . ೫ರಂದು ನಡೆಯಿತು. ಜನವರಿ ೨೮ರಂದು ಗೊನೆ ಕಡಿಯುವುದರ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು.

ಫೆ. ೫ರಂದು ದೈವಗಳಿಗೆ ನಾಗತಂಬಿಲ, ಗಣಹೋಮ, ನಡೆದು ದೈವಗಳಿಗೆ ತಂಬಿಲ ಸೇವೆ ನಡೆಸಲಾಯಿತು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರು, ದೈವಗಳ ಪೂಜಾರಿಗಳು, ಸೇರಿದಂತೆ ಸಮಸ್ತ ಭಕ್ತಾಭಿಮಾನಿಗಳು ಪ್ರತಿಷ್ಠಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. (ವರದಿ :ಡಿ. ಎಚ್.)










