














ಇತ್ತೀಚೆಗೆ ನಿಧನರಾದ ಶೀನಪ್ಪ ಗೌಡ ಕರಡೀಲುರವರಿಗೆ ಶ್ರದ್ಧಾಂಜಲಿ ಸಭೆ ಅವರ ಸ್ವಗೃಹದಲ್ಲಿ ಇಂದು ನಡೆಯಿತು. ಹಿರಿಯರಾದ ಹುದೇರಿ ಗೋಪಣ್ಣ ಗೌಡರು ದೀಪ ಪ್ರಜ್ವಲನೆ ಮಾಡಿ ಪುಷ್ಪರ್ಚನೆ ಮಾಡಿದರು. ನಾಟಿ ವೈದ್ಯರಾದ ಶೀನಪ್ಪ ಗೌಡರು ಹುದೇರಿ ಮನೆತನದ ದೈವ ಪರಿಚರಕಾರಗಿಯೂ ದುಡಿದು, ಶ್ರಮ ಜೀವಿಯಾಗಿ, ಜನರೊಂದಿಗೆ ಬೆರೆತು ಬದುಕಿ ಬಾಳಿದವರು ಅವರು ಸಮಾಜಕ್ಕೆ ಮಾದರಿ ಎಂದು ನುಡಿನಮನ ಸಲ್ಲಿಸಿದ ನ್ಯಾಯವಾದಿ ಜಗದೀಶ್‌ರವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮೃತರ ಪತ್ನಿ ಜಯಶ್ರೀ, ಪುತ್ರ ಪವನಕುಮಾರ್, ಪುತ್ರಿಯರಾದ ಜೀವಿತ, ಚೈತ್ರ, ಅಳಿಯಂದಿರಾದ ಜಗದೀಶ್ ದೀಕ್ಷಿತ್, ಸಹೋದರ ಜನಾರ್ಧನ ಕರಡೀಲು, ಕುಟುಂಬಸ್ಥರು, ಬಂಧುಮಿತ್ರರನ್ನು ಉಪಸ್ಥಿತರಿದ್ದರು.










