ಗುತ್ತಿಗಾರು ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ “ಕಲಿಕಾ ಹಬ್ಬ “2024-25″ ನಿಪುನ್ ಭಾರತ ಪ್ರಾಯೋಜಿತ ” ಕಾರ್ಯಕ್ರಮವನ್ನು ಸ. ಹಿ.. ಪ್ರಾ. ಶಾಲೆ ನಡುಗಲ್ಲು ಇಲ್ಲಿ ಫೆ. 18 ರಂದು ಹಮ್ಮಿ ಕೊಳ್ಳಲಾಯಿತು.
















ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವರಾಮ ಉತ್ರಂಬೆ ವಹಿಸಿದ್ದರು. ಉದ್ಘಾಟನೆಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ಮೂಕ ಮಲೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ಸದಸ್ಯರುಗಳಾದ ವಿಜಯಕುಮಾರ್ ಚಾರ್ಮಾತ, ಹರೀಶ್ ಕೊಯಿಲ, ಶ್ರೀಮತಿ ಲೀಲಾವತಿ ಅಂಜೇರಿ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶಿಕ್ಷಣ ಸಂಯೋಜಕಿ ಶ್ರೀಮತಿ ಧನಲಕ್ಷ್ಮಿ. ಕೆ., ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರಮ್ಯ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತಾಜೆ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿ ಕುಶಾಲಪ್ಪ ಪಾರಪ್ಪಾ ಡಿ, ನಡುಗಲ್ಲು ಶಾಲಾ ಮುಖ್ಯೋಪಾಧ್ಯಾಯ ರಾದ ಚಂದ್ರಶೇಖರ ಪಾರೆಪ್ಪಾ ಡಿ ಉಪಸ್ಥಿತರಿದ್ದರು .
ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಅವರು ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಗುತ್ತಿಗಾರು ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ವೇದಿಕೆಯಲ್ಲಿದ್ದವರನ್ನು “ಕಲಿಕಾ ಹಬ್ಬ ” 2025 ರ ಶಿಕ್ಷಕ-ವಿದ್ಯಾರ್ಥಿ ತಯಾರಿತ ಪೇಟವನ್ನು ನೀಡುವುದರೊಂದಿಗೆ ಗೌರವಿಸಲಾಯಿತು.
ಶ್ರೀಮತಿ ಸುಮಿತ್ರ ಮೂ ಕಮಲೆ ಗ್ರಾಮ ಪಂಚಾಯತ್ ಅಧ್ಯಕ್ಷರು” ಕಲಿಕಾ ಹಬ್ಬ 2025 ” ರ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ಶಿಕ್ಷಕ ಮಹೇಶ್ ಇವರು ಸರ್ವರಿಗೂ ವಂದನೆಗಳನ್ನು ಸಮರ್ಪಿಸಿದರು . ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಶಿಕ್ಷಕಿ ಶ್ರೀಮತಿ ವನಜಾಕ್ಷಿಯವರಿಂದ ಕಾರ್ಯಕ್ರಮ ನಿರ್ವಹಣೆ ನಡೆಯಿತು.
ಸಿ ಆರ್ ಪಿ ಯ ವರು ನಿರ್ಣಾಯಕರಿಗೆ, ನಿರ್ವಾಹಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಏಳು ಸ್ಪರ್ಧಾ ವೇದಿಕೆಗಳಲ್ಲಿ ನಿರಂತರ ಸ್ಪರ್ಧೆಗಳು ನಡೆದವು. ನಿರ್ವಾಹಕರಾಗಿ ಗುತ್ತಿಗಾರು ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಕರ್ತವ್ಯ ನಿರ್ವಹಿಸಿದರೆ, ನಿರ್ಣಾಯಕರುಗಳಾಗಿ ದೇವಚಳ್ಳ ಹಾಗೂ ಹರಿಹರ ಪಲ್ಲತಡ್ಕ ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರನ್ನು ನಿಯೋಜಿಸಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್.ಯು.ಕೆ. ಭೇಟಿ ನೀಡಿದ್ದರು. ಕಥೆ ಕಟ್ಟುವ ಸ್ಪರ್ಧೆ – ಸ್ಪರ್ಧಾ ಪ್ರದರ್ಶನ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು. “ಕಥೆ-ಸ್ಪರ್ಧಾ – ಪ್ರದರ್ಶನ “ವೇದಿಕೆಯಲ್ಲಿ ವಿದ್ಯಾರ್ಥಿ- ಶಿಕ್ಷಕರಿಂದ ಕಲಿಕೋಪಕರಣ ಪ್ರದರ್ಶನ ನಡೆಯಿತು .ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ವಿದ್ಯಾರ್ಥಿ – ಶಿಕ್ಷಕರು ಅತ್ಯುತ್ತಮವಾಗಿ ಕಲಿಕೋಪಕರಣ ಪ್ರದರ್ಶನ ಮಾಡಿ ಎಲ್ಲರಿಗೂ ಕಲಿಕಾ ಸಾಮರ್ಥ್ಯದ – ಅರಿವು ಮಂಡಿಸಲಾಯಿತು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಿಜಯಕುಮಾರ್ ಚಾರ್ಮತ, ಹರೀಶ್ ಕೊಯಿಲ , ಕುಶಾಲಪ್ಪ ತುಂಬತಾ ಜೆ, ಕುಶಾಲಪ್ಪ ಪಾರೆಪ್ಪಾ ಡಿ, ಚಂದ್ರಶೇಖರ ಪಾರೆಪ್ಪಾ ಡಿ, ಶಿವರಾಮ ಉತ್ರಂಬೆ ಉಪಸ್ಥಿತರಿದ್ದರು. ಶ್ರೀಮತಿ ವನಜಾಕ್ಷಿ. ಎಂ. ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ದಿಗೂ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕುಶಾಲಪ್ಪ ತುಂಬತಾಜೆ ಸರ್ವರನ್ನು ಸ್ವಾಗತಿಸಿದರು.
ಮುಖ್ಯ ಗುರುಗಳು ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ಅಂಗವಾಗಿ ಸರ್ವರಿಗೂ ಉಪಹಾರ, ಮಧ್ಯಾಹ್ನದ ಸಿಹಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಾ ತಿಂಡಿ ಊ ಟೋಪಚಾರದ ಮುಖ್ಯ ಪಾಕಾ ತಜ್ಞ ಸತೀಶ್ ಹಲ್ಗುಜಿ ಅಡುಗೆ ತಯಾರಿ ವ್ಯವಸ್ಥೆ ಮಾಡಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ಶಿಕ್ಷಕರು ಸಹಕರಿಸಿದರು.










