ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗುಡ್ಡೆಗೆ ಬೆಂಕಿ

0

ಸುಳ್ಯ ಜಟ್ಟಿಪಳ್ಳ ರಸ್ತೆಯ ಹಿಲ್‌ಸೈಡ್ ಬಾರ್ ಮುಂಭಾಗದಲ್ಲಿರುವ ಗುಡ್ಡೆಗೆ ಬೆಂಕಿ ಹಬ್ಬಿದ ಘಟನೆ ಇದೀಗ ವರದಿಯಾಗಿದೆ.

ಸ್ಥಳೀಯರು ಕೂಡಲೇ ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿಯನ್ನು ನಂದಿಸುವ ಕಾರ್ಯವನ್ನು ಮಾಡಿದ್ದಾರೆ. ಇವರೊಂದಿಗೆ ಸ್ಥಳೀಯರು ಸಹಕಾರ ನೀಡಿದ್ದಾರೆ.