ಪೆರಾಜೆ ಮಸೀದಿ ಬಳಿ ವಾರಿಸುದಾರರಿಲ್ಲದ ಸ್ಕೂಟಿ, ತಿಂಗಳಿಂದ ನಿಲುಗಡೆ

0

ಪೋಲಿಸರಿಗೆ ಮಾಹಿತಿ ನೀಡಿದ ಸ್ಥಳೀಯರು

ಪೆರಾಜೆಯ ಮಸೀದಿ ಬಳಿ ಹೆದ್ದಾರಿ ಪಕ್ಕ ಕಳೆದ ಒಂದು ತಿಂಗಳಿಂದ ಕಪ್ಪು ಬಣ್ಣದ (KA-21 V 8894) ನಂಬರಿನ ಸ್ಕೂಟಿ ವಾಹನ ನಿಂತಿರುವುದು ಕಂಡುಬಂದಿದೆ.

ಆರಂಭದಲ್ಲಿ ಸ್ಥಳೀಯರ ಸ್ಕೂಟಿಯಾಗಿರಬಹುದು ಎಂದು ಇದರ ಬಗ್ಗೆ ಯಾರು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತೆ ತಿಂಗಳಾದರು ಸ್ಕೂಟಿ ಅಲ್ಲೇ ಇದ್ದು, ವಾರಸುದಾರರು ಪತ್ತೆಯಾಗದ ಕಾರಣ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಉನೈಸ್ ಪೆರಾಜೆ ಯವರು ಮಡಿಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಸ್ಕೂಟಿಯಲ್ಲಿ ತಡಕಾಡಿದಾಗ ದೊರೆತ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಕರೆ ಕೂಡ ಸ್ವೀಕಾರ ಆಗುತ್ತಿಲ್ಲ ಎಂದು ತಿಳಿದುಬಂದಿದೆ.