
ಆಲೆಟ್ಟಿಯ ಕುಡೆಕಲ್ಲು ಮನೆತನದ ಹಿರಿಯರಾದ ದೇವಪ್ಪ ಗೌಡ ಮತ್ತು ಶ್ರೀಮತಿ ಚಂದ್ರಾವತಿ ದಂಪತಿಯ ವೈವಾಹಿಕ ಜೀವನದ 50 ವರ್ಷಗಳು ಪೂರೈಸಿರುವ ಸಂದರ್ಭದಲ್ಲಿ ಸುವರ್ಣ ಸಂಭ್ರಮಾಚರಣೆಯನ್ನು ಆಲೆಟ್ಟಿ ಕುಡೆಕಲ್ಲು ಮನೆಯಲ್ಲಿ ಎ.21 ರಂದು ಆಚರಿಸಲಾಯಿತು.















ಹಿರಿಯ ದಂಪತಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕುಡೆಕಲ್ಲು ಕುಟುಂಬದ ಹಿರಿಯ, ಕಿರಿಯ ಸದಸ್ಯರು, ಅತ್ಯಾಡಿ ಕುಟುಂಬದ ಹಿರಿಯರಾದ ಲೋಕಯ್ಯ ಗೌಡ ಅತ್ಯಾಡಿ, ವೆಂಕಟ್ರಮಣ ಗೌಡ ಅತ್ಯಾಡಿ,ಪದ್ಮನಾಭ ಗೌಡ ಅತ್ಯಾಡಿ,ಭರತ ಗೌಡ ಅತ್ಯಾಡಿ, ಲಕ್ಷ್ಮೀಶ್ ಅತ್ಯಾಡಿ,ವಿಪಿನ್ ಅತ್ಯಾಡಿ ಹಾಗೂ ಕುಟುಂಬಸ್ಥರು, ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.

ಪುತ್ರರಾದ ವಿನಯ್ ಕುಮಾರ್ ಕುಡೆಕಲ್ಲು, ಚರಣ್ ಕುಮಾರ್ ಕುಡೆಕಲ್ಲು, ಪುತ್ರಿಯರಾದ ಶ್ರೀಮತಿ ವಿಂದ್ಯಾ ಶಿವರಾಮ ಕಂರ್ಬು ಪೂಜಾರಿಮನೆ, ಶ್ರೀಮತಿ ಆಶಾ ಲೀಲಾಧರ್ ಅಂಬೆಕಲ್ಲು ಉಡುಪಿ, ಸೊಸೆಯಂದಿರಾದ ಶ್ರೀಮತಿ ಚಿತ್ರಾ, ಶ್ರೀಮತಿ ಹಿತಾಕ್ಷಿ ಹಾಗೂ ಮೊಮ್ಮಕ್ಕಳು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರಿಗೆ ಔತಣ ಕೂಟವನ್ನು ಏರ್ಪಡಿಸಲಾಗಿತ್ತು










