ಎ.30,ಮೇ.01 : ನಿಡುಬೆ ಇರ್ವೆರ್ ಉಳ್ಳಾಕುಲು – ಮಾಡತ್ತಕಾನ – ಕಲ್ಲಮಾಡ ಸಾನಿಧ್ಯದಲ್ಲಿ ಪ್ರತಿಷ್ಠಾ ಬ್ರಹ್ಮಕಲಶ

0

ಐವರ್ನಾಡು ಗ್ರಾಮದ ನಿಡುಬೆ ಶ್ರೀ ಇರ್ವೆರ್ ಉಳ್ಳಾಕುಲು ಮಾಡತ್ತಕಾನ ಕಲ್ಲಮಾಡ ಸಾನಿಧ್ಯದ ಪ್ರತಿಷ್ಠಾ ಬ್ರಹ್ಮಕಲಶವು ಎ.30 ಮತ್ತು ಮೇ.01 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು.
ಎ.30 ರಂದು ಸಂಜೆ ಗಂಟೆ 6.30 ರಿಂದ ದೇವತಾ ಪ್ರಾರ್ಥನೆ,
ಆಚಾರ್ಯವರಣ,ಸ್ವಸ್ತಿ | ಪುಣ್ಯಾಹ ವಾಚನ,ಸ್ಥಳ ಶುದ್ಧಿ,ಪ್ರಸಾದ ಶುದ್ಧಿ,ರಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತು ಬಲಿ,ಪ್ರಾಕಾರ ದಿಕ್ಬಲಿ,ಪ್ರಸಾದ ವಿತರಣೆ ನಡೆಯಲಿರುವುದು.
ಮೇ.01 ರಂದು ಗುರುವಾರ ಬೆಳಿಗ್ಗೆ ಗಂಟೆ 7.00 ರಿಂದ ಮಹಾಗಣಪತಿ ಹೋಮ,ಕಲಶ ಪೂಜೆ,
ದಿವಾ ಗಂಟೆ 9.05 ರ ನಂತರ ಮಿಥುನ ಲಗ್ನ ಶುಭಮುಹೂರ್ತದಲ್ಲಿ
ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ಪ್ರತಿಷ್ಠೆ
ಸಾನಿಧ್ಯಕಲಶಾಭಿಷೇಕ,
ತಂಬಿಲ ಸೇವೆ ,ಮಂಗಳಾರತಿ, ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಮೇ.03 ರಂದು ನೇಮೋತ್ಸವ
ಮೇ.03 ರಂದು ಶನಿವಾರ
ಬೆಳಿಗ್ಗೆ ಗಂಟೆ 4.00 ಕ್ಕೆ ಭಂಡಾರ ಹಿಡಿಯುವುದು
ಬೆಳಿಗ್ಗೆ ಗಂಟೆ 7.00 ರಿಂದ
ನಿಡುಬೆ ಇರ್ವೆರ್ ಉಳ್ಳಾಕುಲು ಮಾಡತ್ತಕಾನ ಕಲ್ಲಮಾಡ ಸಾನಿಧ್ಯದಲ್ಲಿ ಶ್ರೀ ಇರ್ವೆರ್ ಉಳ್ಳಾಕುಲು ಮತ್ತು ಉಪದೈವಗಳ ನೇಮೋತ್ಸವ ಜರಗಲಿರುವುದು.
ಭಕ್ತಾದಿಗಳು ಸಕುಟುಂಬಿಕರಾಗಿ ಬಂದು ಭಾಗವಹಿಸಿ ಶ್ರೀ ದೈವ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ,ಶ್ರೀ ದೈವ ದೇವರುಗಳ ಕೃಪೆಗೆ ಪಾತ್ರರಾಗಬೇಕಾಗಿ ಭಂಡಾರದ ಮನೆಯ ವೀರಪ್ಪ ಗೌಡ ಜಬಳೆ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಕೇಶವ ಹಸಿಯಡ್ಕ ಮತ್ತು ಸದಸ್ಯರು ತಿಳಿಸಿದ್ದಾರೆ.