ನಿಂತಿಕಲ್ಲಿನ ಕೆ.ಎಸ್ ಗೌಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ ಐದನೇ ಬಾರಿಗೆ ಶೇ 100 ಫಲಿತಾಂಶ ಸಾಧಿಸುವ ಮೂಲಕ ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಹಾಜರಾದ 15 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳೂ ತೇರ್ಗಡೆ ಹೊಂದಿ ಶೇ. 100 ಫಲಿತಾಂಶ ದಾಖಲಾಗಿದೆ. 9 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 06 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.















ಅಲೆಕ್ಕಾಡಿಯ ದಯಾನಂದ ಎ ಮತ್ತು ವಿದ್ಯಾಲತಾ ಕೆ ದಂಪತಿಗಳ ಪುತ್ರಿ ಅಪೇಕ್ಷಾ ಎ 619 ( 99.04%), ನಿಂತಿಕಲ್ಲಿನ ಸದಾನಂದ ಪಿ ಮತ್ತು ಶ್ಯಾಮಲಾ ದಂಪತಿಗಳ ಪುತ್ರಿ ನಮ್ರತಾ ಪಿ 612 (97.92%), ಎಣ್ಮೂರು ಗ್ರಾಮ, ಉಳ್ಳಲಾಡಿ ಮನೆಯ ಮೊಹಮ್ಮದ್ ಅಬ್ಬಾಸ್ ಮತ್ತು ಸಾರಮ್ಮ ಮೊಹಮದ್ ಅಬ್ಬಾಸ್ ದಂಪತಿಗಳ ಪುತ್ರಿ ಶಮೀದಾ 600 ( 96 % ), ದೇಲಂಪಾಡಿಯ ಜಯಪ್ರಕಾಶ್ ರೈ ಡಿ ಮತ್ತು ದಯಾನಂದಿ ರೈ ಡಿ ದಂಪತಿಗಳ ಪುತ್ರಿ ದಿಶಾ ಜೆ ರೈ 584 ( 93.44 % ), ನಿಂತಿಕಲ್ಲು, ಪಜಿಂಬಿಲ ಮನೆಯ ಚಂದ್ರಹಾಸ ಶೆಟ್ಟಿ ಮತ್ತು ಲತಾ ಸಿ ಶೆಟ್ಟಿ ದಂಪತಿಗಳ ಪುತ್ರ ಪಿ ಚಿನ್ಮಯ್ ಶೆಟ್ಟಿ 570 ( 91.2 %), ಕೋಟೆ ಮುಂಡುಗಾರು ಕೆ ಸತ್ಯನಾರಾಯಣ ಮತ್ತು ಜಯಪ್ರಭ ದಂಪತಿಗಳ ಪುತ್ರ ಯಜ್ಞೇಶ್ 564 ( 90.24%), ಕೇನ್ಯ ಗ್ರಾಮದ ಅರುಣ್ ರೈ ಕೇನ್ಯ ಮತ್ತು ದಿವ್ಯಾ ದಂಪತಿಗಳ ಪುತ್ರ ಹರಿಕೃಷ್ಣ ಎ ರೈ 552 ( 88.32 %), ಪುಣ್ಚಪ್ಪಾಡಿಯ ತೋಟತಡ್ಕ ಮನೆಯ ವಿಶ್ವನಾಥ ಗೌಡ ಎಂ ಮತ್ತು ಪುಷ್ಪಾವತಿ ಐ ಕೆ ದಂಪತಿಗಳ ಪುತ್ರ ಪ್ರಜ್ಞೇಶ್ 547, (87.52 %), ಕರಿಕ್ಕಳ ಗ್ರಾಮದ ಅತ್ಯಡ್ಕ ಮನೆಯ ಎ ಸುರೇಶ ಮತ್ತು ವನಿತಾ ಎ ದಂಪತಿಗಳ ಪುತ್ರಿ ಅಂಶಿಕಾ ಎ 546 ( 87.36 %) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.










