














ರೌಡಿ ಶೀಟ್ ಹೊಂದಿದ ವ್ಯಕ್ತಿಯನ್ನು ಸಾರ್ವಜನಿಕ ವಾಗಿ ಬರ್ಬರ ಹತ್ಯೆ ಮಾಡಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಮತ್ತು ಕೊಲೆ ಆರೋಪಿಗಳನ್ನು ಅತೀ ಶೀಘ್ರದಲ್ಲಿ ಪತ್ತೆ ಹಚ್ಚಿ ಕಾನೂನಿನ ಅಡಿಯಲ್ಲಿ ಅವರನ್ನು ಶಿಕ್ಷಿಸುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸುತ್ತೇನೆ. ಆದರೆ ರೌಡಿ ಶೀಟ್ ಹೊಂದಿದ ವ್ಯಕ್ತಿ ಹಿಂದೂ ಆಗಿರಲಿ ಮುಸ್ಲಿಂ ಆಗಿರಲಿ ಆತ ಒಬ್ಬ ಸಮಾಜ ಘಾತಕ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ! ಅಷ್ಟಕ್ಕೂ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ ಅದರದ್ದೇ ಆದ ಸಿದ್ಧಾಂತ ಗಳನ್ನು ಮೈಗೂಡಿಸಿಕೊಂಡು ಎತ್ತರಕ್ಕೆ ಬೆಳೆದಿರುವ ಪಕ್ಷ ಇಂತಹ ಪಕ್ಷ ರೌಡಿ ಪಟ್ಟಿಯಲ್ಲಿ ಇರುವ ಮತ್ತು ಕೊಲೆ ಪ್ರಕರಣದ ಆರೋಪಿಯನ್ನು ತಮ್ಮ ಪಕ್ಷದ ಕಾರ್ಯಕರ್ತ ಎಂದು ಮುಂದಿಟ್ಟುಕೊಂಡು ಇವತ್ತು ಸುಳ್ಯ ಬಂದ್ ಮಾಡಿರೋ ಕ್ರಮ ಎಷ್ಟು ಸರಿ? ಎಂದು ಸುಳ್ಯನಗರ ಪಂಚಾಯತ್ ಸದಸ್ಯ, ನ್ಯಾಯವಾದಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ









