ಕೋಲ್ಚಾರು: ಕುಡೆಂಬಿ ವಿಷ್ಣುಮೂರ್ತಿ ಪಡಿಂಞರ ಚಾಮುಂಡಿ ಕೊರತ್ತಿ ದೈವಗಳ ಸಾನಿಧ್ಯದಲ್ಲಿ ಪ್ರತಿಷ್ಠಾ ಕಲಶೋತ್ಸವ

0

ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕುಡೆಂಬಿ ಶ್ರೀ ವಿಷ್ಣುಮೂರ್ತಿ,ಶ್ರೀ ಪಡಿಂಞರ ಚಾಮುಂಡಿ ಮತ್ತು ಕೊರತ್ತಿ ದೈವಗಳ ಸಾನಿಧ್ಯದಲ್ಲಿ ಕುಂಟಾರು ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ವಾಸುದೇವ ತಂತ್ರಿ ಹಾಗೂ ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಯವರ ನೇತೃತ್ವದಲ್ಲಿ ‌ನಾಗ ಮತ್ತು ಗುಳಿಗ ದೈವದ ಪುನಃ ಪ್ರತಿಷ್ಠೆ ಹಾಗೂ ಶ್ರೀವಿಷ್ಣುಮೂರ್ತಿ ಪಡಿಂಞರ ಚಾಮುಂಡಿ, ಕೊರತ್ತಿ ,ಕಾಲ್ಚನ್ ದೈವಗಳ ಪ್ರತಿಷ್ಠಾ ಕಲಶೋತ್ಸವವು ಮೇ.22 ಮತ್ತು 23 ರಂದು ಜರುಗಿತು.

ಮೇ.16 ರಂದು ಗೊನೆ ಮುಹೂರ್ತವಾಗಿ ಮೇ.20 ರಂದು ನಾಗನ ಕಟ್ಟೆ ಮತ್ತು ದೈವಸ್ಥಾನದಲ್ಲಿ ಕುಟ್ಟಿ ಪೂಜೆಯು ನಡೆಯಿತು. ಮೇ.22 ರಂದು ಬೆಳಗ್ಗೆ ಉಗ್ರಾಣ ತುಂಬುವ ಕಾರ್ಯಕ್ರಮ ನಡೆದು ಸಂಜೆ ತಂತ್ರಿಗಳ ಆಗಮನವಾಗಿ ದೇವತಾ ಪ್ರಾರ್ಥನೆಯಾಗಿ ಆಚಾರ್ಯವರಣ,ಪುಣ್ಯಾಹವಾಚನ,ಸುದರ್ಶನ ಹೋಮ,ಪ್ರೇತವಾಹನೆ,ಬಾಧಾಮೂರ್ತಿಗಳ ಆವಾಹನೆ,ಉಚ್ಚಾಟನೆ, ಉಚ್ಚಾಟನೆ ಬಲಿ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ,ವಾಸ್ತು ಬಲಿ,ವಾಸ್ತು ಪುಣ್ಯಾಹಂತ ವೈದಿಕ ಕಾರ್ಯಕ್ರಮಗಳು ನಡೆಯಿತು. ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆಯಾಯಿತು.


ಮೇ.23 ರಂದು ಬೆಳಗ್ಗೆ ಗಣಪತಿ ಹವನವಾಗಿ ಬ್ರಹ್ಮಕಲಶ ಪೂಜೆಯಾಗಿ ಗಂಟೆ 8.39- 9.49 ರ ಮುಹೂರ್ತದಲ್ಲಿ ನಾಗ ದೇವರ ಪುನರ್ ಪ್ರತಿಷ್ಠೆ ಮತ್ತು ಶ್ರೀ ವಿಷ್ಣುಮೂರ್ತಿ ಶ್ರೀ ಪಡಿಂಞರ ಚಾಮುಂಡಿ ಹಾಗೂ ಶ್ರೀ ಕೊರತ್ತಿ ದೈವಗಳ ಪೀಠ ಪ್ರತಿಷ್ಠೆಯಾಗ ಬ್ರಹ್ಮ ಕಲಶಾಭಿಷೇಕವಾಗಿ ಮಹಾಪೂಜೆಯು ಜರುಗಿತು.
ಬಳಿಕ ತಂತ್ರಿಯವರ ಸಮ್ಮುಖದಲ್ಲಿ ನಿತ್ಯ ನೈಮಿತ್ಯಾದಿಗಳ ನಿರ್ಣಯವಾಗಿ ಪ್ರಸಾದ ವಿತರಣೆಯಾಗಿ ಆಗಮಿಸಿದ ಭಕ್ತಾದಿಗಳಿಗೆ ಅನ್ನಪ್ರಸಾದ
ವಿತರಣೆಯಾಯಿತು.


ದೈವಸ್ಥಾನದ ಆಡಳ್ತೆದಾರ ಜಯಚಂದ್ರ ಕದಿಕಡ್ಕ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ವೆಂಕಪ್ಪ ಗೌಡ ಕದಿಕಡ್ಕ, ಅಧ್ಯಕ್ಷ ಕೇಶವ ಕರ್ಲಪ್ಪಾಡಿ ಕುಡೆಂಬಿ, ಪ್ರಧಾನ ಕಾರ್ಯದರ್ಶಿ ತೀರ್ಥಕುಮಾರ್ ಕದಿಕಡ್ಕ, ಕಾರ್ಯದರ್ಶಿ ಆನಂದ ಕದಿಕಡ್ಕ, ಕೋಶಾಧಿಕಾರಿ ನಿತ್ಯಾನಂದ ಕುಡೆಂಬಿ,
ಗೌರವ ಸಲಹೆಗಾರರಾದ ಮುದ್ದಪ್ಪ ಗೌಡ ಕರ್ಲಪ್ಪಾಡಿ, ಪುರುಷೋತ್ತಮ ಕೋಲ್ಚಾರು, ಹರೀಶ್ ಕೊಯಿಂಗಾಜೆ, ಬಾಲಕೃಷ್ಣ ಕುಡೆಂಬಿ, ಕೊರಗಪ್ಪ ಗೌಡ ಪರಮಂಡಲ,ಪುರುಷೋತ್ತಮ ಕದಿಕಡ್ಕ, ರಂಗಪ್ಪ ನಾಯ್ಕ್ ಕುಡೆಂಬಿ, ಶಿವಣ್ಣ ನಾಯ್ಕ್ ಕುಡೆಂಬಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರು,ಸದಸ್ಯರು ಮತ್ತು ಕುಡೆಂಬಿ ಬೈಲಿನ ಸಮಸ್ತರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರದ ಬಾಬ್ತು ಹಮ್ಮಿಕೊಂಡ ಲಕ್ಕಿ‌ ಕೂಪನ್ ವಿಜೇತ ಅದೃಷ್ಟ ಶಾಲಿಗಳಿಗೆ ಬಹುಮಾನ ವಿತರಿಸಲಾಯಿತು.