ಮೇ.31 ರಂದು ವಾಣಿಜ್ಯ ತೆರಿಗೆ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸುಂದರ ಆಲೆಟ್ಟಿ ನಿವೃತ್ತಿ

0

ಪುತ್ತೂರು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಂದರ ಆಲೆಟ್ಟಿ ಯವರು ಸುದೀರ್ಘ 35 ವರ್ಷಗಳ ವೃತ್ತಿ ಸೇವೆಯಿಂದ
ಮೇ.31 ರಂದು ನಿವೃತ್ತಿ ಹೊಂದಲಿದ್ದಾರೆ.

ಇವರು ಆಲೆಟ್ಟಿ ಗ್ರಾಮದ ಕುರಿಂಜ ದಿ.ನಾರಾಯಣ ಮಣಿಯಾಣಿ ಮತ್ತು ಶ್ರೀಮತಿ ಸೀತಮ್ಮ ದಂಪತಿಯ ಪುತ್ರನಾಗಿ, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಆಲೆಟ್ಟಿಯ ನಾರ್ಕೋಡು ಸ.ಹಿ.ಪ್ರಾ.ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯಸರಕಾರಿಜೂನಿಯರ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ.

1990 ರಲ್ಲಿ ಡಿ.ದರ್ಜೆ ನೌಕರನಾಗಿ ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ಉದ್ಯೋಗಕ್ಕೆ ಸೇರ್ಪಡೆಗೊಂಡು 2005 ರ ತನಕ ಮಂಗಳೂರಿನ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. 2005 ರಿಂದ 2010 ರ ತನಕ ಗುಪ್ತ ವಾರ್ತಾ ವಿಭಾಗ ಮಡಿಕೇರಿ ಮತ್ತು ಮಾರಾಟ ತೆರಿಗೆಯ ತನಿಖಾ ಠಾಣೆ ವಿರಾಜ ಪೇಟೆಯಪೆರಂಬಾಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಬಳಿಕ 2010 ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಭಡ್ತಿ ಹೊಂದಿದ್ದುಮಂಗಳೂರಿನ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಎನ್ ಪೋರ್ಸ್ ಮೆಂಟ್ ವಿಭಾಗಕ್ಕೆ ವರ್ಗಾವಣೆ ಹೊಂದಿರುತ್ತಾರೆ. ಒಂದು ವರ್ಷ ಉಡುಪಿಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸೇವೆ ಸಲ್ಲಿಸಿ, 2017 ರಲ್ಲಿ ಪುತ್ತೂರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ಸಲ್ಲಿಸಿದ್ದರು. 2021 ರಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಪದೋನ್ನತಿ ಹೊಂದಿ ಪುತ್ತೂರು ವಾಣಿಜ್ಯ ತೆರಿಗೆ ಅಧಿಕಾರಿ (ಲೆಕ್ಕ ಪರಿಶೋಧನೆ )ವಿಭಾಗದಲ್ಲಿ ಕರ್ತವ್ಯ ಸಲ್ಲಿಸಿ 2025 ರ ಮೇ.31 ರಂದು ವೃತ್ತಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಇವರು ಪ್ರಸ್ತುತ ಆಲೆಟ್ಟಿಯಲ್ಲಿ ಪತ್ನಿ ಶ್ರೀಮತಿ ಉಷಾ ಹಾಗೂ ಪುತ್ರ ಕಾರ್ತಿಕ್, ಪುತ್ರಿ ಕು.ಕೀರ್ತನಾ ರೊಂದಿಗೆ ವಾಸವಾಗಿದ್ದಾರೆ.