ಅರುಣ್ ಕುಮಾರ್ ನೂತನ ಎಸ್ಪಿ, ಸುಧೀರ್ ಕುಮಾರ್ ರೆಡ್ಡಿ ಕಮೀಷನರ್
ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಹತ್ಯೆ ಘಟನೆಗಳ ಹಿನ್ನೆಲೆಯಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.
ದ.ಕ. ಎಸ್ಪಿ ಯತೀಶ್, ಮಂಗಳೂರು ಕಮೀಷನರ್ ಅನುಪಮ್ ಅಗರ್ವಾಲ್ ವರ್ಗಾವಣೆಯಾಗಿದೆ.















ಅರುಣ್ ಕುಮಾರ್ ಅವರು ದ.ಕ.ಜಿಲ್ಲಾ ನೂತನ ಎಸ್ಪಿಯಾಗಿ ವರ್ಗಾವಣೆಯಾಗಿದ್ದು, ಸುಧೀರ್ ಕುಮಾರ್ ರೆಡ್ಡಿ ಕಮೀಷನರ್ ಆಗಿ ವರ್ಗಾವಣೆಯಾಗಿದೆ.
2017 ರಲ್ಲಿ ದ.ಕ. ಎಸ್ಪಿಯಾಗಿ ತನ್ನ ಖಡಕ್ ನಿರ್ಧಾರಗಳಿಂದ ಸುದ್ದಿ ಮಾಡಿದ್ದ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಮಂಗಳೂರು ಕಮೀಷನರ್ ಆಗಿ ಬರುತ್ತಿದ್ದಾರೆ. ಉಡುಪಿಯ ಎಸ್ಪಿಯಾಗಿರುವ ಅರುಣ್ ಕುಮಾರ್ ಅವರು ದಕ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.










