
ಅರಂತೋಡು ಕಿರ್ಲಾಯ ಅಶೋಕ ಮೇಲಡ್ತಲೆ ಇವರ ತೋಟಕ್ಕೆ ಜೂ.14 ರ ರಾತ್ರಿ ಆನೆಗಳ ಗುಂಪು ದಾಳಿ ನಡೆಸಿ ಅಪಾರ ಬಾಳೆ ಕೃಷಿ ಹಾನಿ ಮಾಡಿದೆ.
















ಅರಂತೋಡು ಗ್ರಾಮದ ದೇರಾಜೆ, ಗುಂಡ್ಲ, ಕಳುಬೈಲು, ಬನ, ಕಿರ್ಲಾಯ ಇಲ್ಲಿ ಇತ್ತೀಚಿನ ದಿನಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಕೃಷಿಯನ್ನೇ ಅವಲಂಬಿತವಾಗಿರುವ ಈ ಬಾಗದ ಕೃಷಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ತೊಂದರೆ ಮಾಡುತ್ತಿರುವ ಆನೆಗಳನ್ನು ದಟ್ಟ ಕಾಡಿಗೆ ಅಟ್ಟಿಸುವುದಕ್ಕೆ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೊಂದ ಕೃಷಿಕರು ತಿಳಿಸಿದ್ದಾರೆ.











