ತುಂಬಿ ಹರಿಯುತ್ತಿರುವ ಕುಮಾರಧಾರ ನದಿ

0

ಜಲಾವೃತಗೊಂಡ ಸ್ನಾನಘಟ್ಟ

ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ.

ಕುಮಾರಪರ್ವತ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಹಾಗೂ ಸುಬ್ರಹ್ಮಣ್ಯ ಸುತ್ತ ಮುತ್ತ ನಿರಂತರ ಮಳೆಯಿಂದ ಹೆಚ್ಚು ನೀರು ಹರಿದು ಬರುತ್ತಿದೆ.
ಸ್ನಾನಘಟ್ಟ ಜಲಾವೃತವಾಗಿದ್ದು ಭಕ್ತಾದಿಗಳಿಗೆ ನದಿ ಗಿಳಿಯದಂತೆ ಸೂಚನೆ ನೀಡಲಾಗಿದೆ.
ನದಿಗಿಳಿದು ತೀರ್ಥ ಸ್ನಾನಕ್ಕೆ ಅವಕಾಶ ನಿರಾಕರಿಸಲಾಗಿದ್ದು,
ಭಕ್ತಧಿಗಳಿಗೆ ನದಿ ದಡ ದಲ್ಲಿ ಡ್ರಮ್ ನಲ್ಲಿ ಸಂಗ್ರಹಿಸಿದ ನದಿ ನೀರಿನ ಮೂಲಕ ತೀರ್ಥಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ.


ದೇವಳದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು , ಸ್ನಾನ ಘಟ್ಟದಲ್ಲಿ ಭದ್ರತ ಸಿಬ್ಬಂದಿಗಳ ನೇಮಕ ಮಾಡಲಾಗಿದೆ.