ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

0

ಎಂಡೋ ಪಾಲನಾ ಕೇಂದ್ರದ ನೂತನ ಕಟ್ಟಡ ವೀಕ್ಷಣೆ – ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಜೂ.18 ರಂದು ಭೇಟಿ ನೀಡಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳು,ಪಕ್ಷದ ಮುಖಂಡರು ಸಚಿವರನ್ನು ಸ್ವಾಗತಿಸಿದರು.

ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ,.ತಾಲೂಕು ಆರೋಗ್ಯಾಧಿಕಾರಿ ಡಾ.ತ್ರಿಮೂರ್ತಿ ಹಾಗೂ ಡಾ.ಮಂಜುನಾಥ್ ರವರೊಂದಿಗೆ ಆಸ್ಪತ್ರೆಯ ಕುಂದುಕೊರತೆಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.
ಜನಪ್ರತಿನಿಧಿಗಳೊಂದಿಗೆ,ಸಾರ್ವಜನಿಕರೊಂದಿಗೆ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ನೂತನವಾಗಿ ನಿರ್ಮಾಣವಾದ ಎಂಡೋ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಬಳಿಕ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ತಹಶೀಲ್ದಾರ್ ಮಂಜುಳಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಮುಖಂಡರಾದ ಹರೀಶ್ ಕುಮಾರ್ ಕೆ,ಪಿ.ಸಿ.ಜಯರಾಮ, ರಾಧಾಕೃಷ್ಣ ಬೊಳ್ಳೂರು, ಸುಳ್ಯ ಸೂಡ ಅಧ್ಯಕ್ಷ ಕೆ.ಎಂ.ಮುಸ್ತಾಫ, ಟಿ.ಎಂ.ಶಹೀದ್, ಸರಸ್ವತಿ ಕಾಮತ್,ಜಿ.ಕೃಷ್ಣಪ್ಪ, ಸದಾನಂದ ಮಾವಾಜಿ,ಅನಿಲ್ ರೈ ಚಾವಡಿಬಾಗಿಲು, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶ್ರೀಮತಿ ರಾಜೀವಿ ಆರ್.ರೈ, ಪ್ರವೀಣ ರೈ ಮರುವಂಜ, ಶಕುಂತಳಾ ನಾಗರಾಜ್, ಅನುಸೂಯ ಪೆರುವಾಜೆ, ಅಶೋಕ್ ನೆಕ್ರಾಜೆ,ಚಂದ್ರಾ ಕೋಲ್ಚಾರ್, ಚಂದ್ರಶೇಖರ ಪನ್ನೆ, ಮಣಿಕಂಠ ಕಲ್ಲೋಣಿ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ಪ್ರಶಾಂತ್ ರೈ ಮರುವಂಜ, ಪ್ರೇಮ್ ಬೆಳ್ಳಾರೆ, ವಿಶ್ವನಾಥ ರೈ ತಡಗಜೆ, ಆನಂದ ಬೆಳ್ಳಾರೆ, ಶಾಫಿ ಕುತ್ತಮೊಟ್ಟೆ, ಅಬ್ದುಲ್ ಗಫೂರ್, ಶರೀಫ್ ಭಾರತ್ , ಗ್ರಾ.ಪಂ.ಪಿಡಿಒ ಪ್ರವೀಣ್ ಸಿ.ವಿ. ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.