














ಅಮರಮುಡ್ನೂರು ಗ್ರಾಮದ ಪ್ರವಾಸಿ ತಾಣವಾಗಿರುವ ಚಾಮಡ್ಕ ಫಾಲ್ಸ್ ಗೆ ನಿರಂತರವಾಗಿ ಪ್ರವಾಸಿಗರು ಆಗಮಿಸುತ್ತಿದ್ದು ಇದೀಗ ಮಳೆಗಾಲದಲ್ಲಿ ನೀರಿನ ಹರಿವುಹೆಚ್ವಾಗಿರುವುದರಿಂದ ಅನಾಹುತ ಸಂಭವಿಸಿದಂತೆ ಮುಂಜಾಗೃತಾ ಕ್ರಮವಾಗಿ ಪ್ರವಾಸಿಗರಿಗೆ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ದ.ಕ ಜಿಲ್ಲಾಧಿಕಾರಿ ಆದೇಶದಂತೆ ಅಮರಮುಡ್ನೂರು ಪಂಚಾಯತ್ ವತಿಯಿಂದ ನಿಷೇಧ ಹೇರಿದ ಬರವಣಿಗೆಯ ಬ್ಯಾನರ್ ಸ್ಥಳದಲ್ಲಿ ಅಳವಡಿಸಲಾಗಿದೆ. ಸಾರ್ವಜನಿಕರು
ಮಳೆಯ ಪ್ರಮಾಣ ಕಡಿಮೆಯಾಗುವ ತನಕ ಈ ಆದೇಶವನ್ನು ಪಾಲಿಸುವಂತೆ ಪಂಚಾಯತ್ ಅಧಿಕಾರಿಯವರು ತಿಳಿಸಿರುತ್ತಾರೆ.










