
ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ
ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21
ಆಚರಿಸಲಾಯಿತು.
















ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ವೇತಾ ಲಕ್ಷ್ಮಿ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ವನ್ನು ತಿಳಿಸಿಕೊಟ್ಟರು ಹಾಗೂ ಕೆಲವು ಯೋಗ ಮುದ್ರೆಗಳು ಹಾಗೂ ಪ್ರಾಣಾಯಾಮ ಮಾಡಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕುl ಮನ್ವಿತ ವಹಿಸಿದ್ದರು ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ ಹಾಗೂ ಶಾಲಾ ಸಂಚಾಲಕರಾದ ಚಂದ್ರಶೇಖರ ನಾಯರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಕುಮಾರಿ ಕಣ್ಮಣಿ ನಿರೂಪಿಸಿದರು.










