ಮುರುಳ್ಯ ಪಂಚಾಯತ್‌ನಲ್ಲಿ ಜನ ಸುರಕ್ಷಾ ಯೋಜನೆಗಳ ಸಂಪೂರ್ಣ ಜಾಗೃತಿ ಕಾರ್ಯಕ್ರಮ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ನಿಂತಿಕಲ್ಲು ಶಾಖೆ ಅಪೇಕ್ಷಾ ಬ್ಯಾಂಕ್ ಹಾಗೂ ಲೀಡ್ ಬ್ಯಾಂಕ್ ಗಳ ಸಹಯೋಗಗಳೊಂದಿಗೆ ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣರವರ ಅಧ್ಯಕ್ಷತೆಯಲ್ಲಿ ಜೂನ್ ೨೦ ರಂದು ಪಂಚಾಯತ್ ಸಭಾಂಗಣದಲ್ಲಿ ಜನ ಸುರಕ್ಷಾ ಯೋಜನೆಗಳ ಸಂಪೂರ್ಣ ಜಾಗೃತಿ ಕಾರ್ಯಕ್ರಮ ನಡೆಯಿತು, ವನಿತಾ ಸುವರ್ಣರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಾ ಹಾರೈಸಿದರು.


ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷೆ ಕು. ಜಾನಕಿ ಮುರುಳ್ಯ, ಕಾರ್ಯದರ್ಶಿ ಸೀತಾರಾಮ ಎಸ್. ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ದ ಶ್ರೀಮತಿ ಸುಜಾತರವರು ಕಾರ್ಯಕ್ರಮದ ಬಗ್ಗೆ ಸಂಪೂರ್ಣ ವಿವರಣೆ ನೀಡಿ ಕಾರ್ಯಗಾರ ನಡೆಸಿಕೊಟ್ಟರು.


ನಿಂತಿಕಲ್ಲು ಶಾಖಾಧಿಕಾರಿ ಶ್ರೀಮತಿ ಸುಧಾ ಹಿಮಕರ್ ಬ್ಯಾಂಕಿನಲ್ಲಿ ೨೦ ಸಾವಿರ ಖಾತೆಯಲ್ಲಿ ಉಳಿತಾಯ ಮಾಡಿದರೆ ವಿಮಾ ಸೌಲಭ್ಯಗಳ ಮತ್ತು ಸವಲತ್ತು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು, ಪಂಚಾಯತ್ ಸಿಬ್ಬಂದಿ ಪ್ರದೀಪ್ ರೈ ಕಾರ್ಯಕ್ರಮ ನಿರೂಪಿಸಿದರು.