ಜೂ.30 :ಸುಳ್ಯ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಚಿದಾನಂದ ಗೌಡ ಬಾಳಿಲ ಮತ್ತು ಕಚೇರಿ ಅಧೀಕ್ಷಕ ಭವಾನಿಶಂಕರ ಅಡ್ತಲೆಯವರಿಗೆ ಸನ್ಮಾನ

0

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’ ಹಾಗೂ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆ ಕುರುಂಜಿಭಾಗ್ ವತಿಯಿಂದ ಕೆವಿಜಿ ಐಟಿಐ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಜೂ.30 ರಂದು ಸೇವೆಯಿಂದ ನಿವೃತ್ತಿಗೊಳ್ಳುತ್ತಿರುವ ಚಿದಾನಂದ ಗೌಡ ಬಾಳಿಲ ಮತ್ತು ಕಚೇರಿ ಅಧೀಕ್ಷರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಭವಾನಿಶಂಕರ ಅಡ್ತಲೆಯವರಿಗೆ ಸನ್ಮಾನ ಕಾರ್ಯಕ್ರಮವು ಜೂ.30 ರಂದು ಕೆವಿಜಿ ಐ.ಪಿ.ಎಸ್ ಅಡಿಟೋರಿಯಂ ನಲ್ಲಿ ನಡೆಯಲಿದೆ.
ಎ.ಓ.ಎಲ್.ಇ ಕಮಿಟಿ ‘ಬಿ’ ಇದರ ಚೇರ್ ಮೆನ್ ಡಾ.ರೇಣುಕಾಪ್ರಸಾದ್ ಕೆ.ವಿ.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯದರ್ಶಿ ಶ್ರೀಮತಿ ಡಾ.ಜ್ಯೋತಿ ಆರ್.ಪ್ರಸಾದ್ , ಕರ್ನಾಟಕ ರಾಜ್ಯ ಖಾಸಗಿ ಅನುದಾನಿತ ಐ.ಟಿ.ಐ ನೌಕರರ ಸಂಘ ಹುಬ್ಬಳ್ಳಿ ಇದರ ಅಧ್ಯಕ್ಷ ಎಸ್.ಆರ್.ರವಿ, ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್.ಕುರುಂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ.ಯಶೋದಾ ರಾಮಚಂದ್ರರವರು ಅಭಿನಂದನಾ ಭಾಷಣ ಮಾಡಲಿದ್ದಾರೆ