ಕುಕ್ಕೆ ಸುಬ್ರಹ್ಮಣ್ಯಕ್ಕೆ ಶಿರೂರು ಮಠಾಧೀಶರ ಭೇಟಿ

0

ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯರು ಉಡುಪಿಯ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಜು.1 ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪುರ ಪ್ರವೇಶಿಸಿದರು.

ಆರಂಭದಲ್ಲಿ ಕಾಶಿಕಟ್ಟೆಗೆ ಆಗಮಿಸಿದ ಅವರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ತುಳಸಿ ಹಾರ ಸಮರ್ಪಿಸಿ ಸ್ವಾಗತಿಸಿದರು.ಬಳಿಕ ಶ್ರೀಗಳು ಕಾಶಿಕಟ್ಟೆ ಮಹಾಗಣಪತಿಯ ದರುಶನ ಮಾಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

ಬಳಿಕ ಕಾಶಿಕಟ್ಟೆಯಿಂದ ಭಕ್ತಿಪೂರ್ವಕವಾದ ಮೆರವಣಿಗೆ ಆರಂಭವಾಯಿತು.ಪ್ರಾರಂಭದಲ್ಲಿ ಶ್ರೀ ದೇವಳದ ಆನೆ ಯಶಸ್ವಿ ಶ್ರೀಗಳಿಗೆ ತನ್ನ ಸೊಂಡಿಲನ್ನು ಎತ್ತಿ ಸ್ವಾಗತಿಸಿತು.ನಂತರ ಆನೆ, ಬಿರುದಾವಳಿ, ಮಂಗಳವಾದ್ಯ, ಪೂರ್ಣಕುಂಭ ಮತ್ತು ಋತ್ವಿಜರ ಮಂತ್ರಘೋಷದೊಂದಿಗೆ ಕಾಶಿಕಟ್ಟೆಯಿಂದ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಶ್ರೀಗಳನ್ನು ಕರೆದೊಯ್ಯಲಾಯಿತು.ಶ್ರೀ ದೇವರ ದರುಶನ ಮಾಡಿದರು.

ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯ, ಪುರೋಹಿತ ಕುಮಾರ ಬೈಪಡಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹಿರಿಯ ನೌಕರ ಕೆ.ಎಂ.ಗೋಪಿನಾಥ್ ನಂಬೀಶ, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ನೇಮಿರಾಜ್, ಸ್ಥಳೀಯರಾದ ಕಿಶೋರ್ ಆರಂಪಾಡಿ, ದಿನೇಶ್ ಎಣ್ಣೆಮಜಲು, ಸುಬ್ರಹ್ಮಣ್ಯ ಮಣಿಯಾಣಿ ಕುಲ್ಕುಂದ ಭವಿಶ್ ಅಯ್ಯೆಟ್ಟಿ, ವೇಣುಗೋಪಾಲ ಶಾಸ್ತ್ರಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.