ಪಂಜ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ನೂತನ ಅಧ್ಯಕ್ಷ ಲlನಾಗೇಶ್ ತೆಂಕಪ್ಪಾಡಿ- ಕಿನ್ನಿಕುಮ್ರಿ ಮತ್ತು ತಂಡ ಪದ ಸ್ವೀಕಾರ

ಪಂಜ ಲಯನ್ಸ್ ಕ್ಲಬ್ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.5.ರಂದು ಪಡ್ಪಿನಂಗಡಿ ನಡ್ಕ ಶಿವ ಗೌರಿ ಕಲಾಮಂದಿರದಲ್ಲಿ ನಡೆಯಿತು. ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲl ಶಶಿಧರ್ ಪಳಂಗಾಯ ಸಭಾಧ್ಯಕ್ಷತೆ ವಹಿಸಿದ್ದರು. ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಲl ಯಚ್ ಯಂ ತಾರಾನಾಥ್ ಮಾತನಾಡಿ “ಗ್ರಾಮೀಣ ಪ್ರದೇಶದ ಪಂಜ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡು ಲಯನ್ಸ್ ಜಿಲ್ಲೆಗೆ ಹೆಮ್ಮೆ ತಂದು ಕೊಟ್ಟಿದ್ದು ಸಧೃಡ ಕ್ಲಬ್ ಆಗಿ ಬೆಳೆದಿದೆ.” ಎಂದು ಹೇಳಿದರು.

ಪದಗ್ರಹಣ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷ ಲl ನಾಗೇಶ್ ತೆಂಕಪ್ಪಾಡಿ ಕಿನ್ನಿಕುಮ್ರಿ ಸಭಾಧ್ಯಕ್ಷತೆ ವಹಿಸಿ ಅವರ ಪತ್ನಿ ಶ್ರೀಮತಿ ಜಯಂತಿ ರವರೊಂದಿಗೆ ದೀಪ ಬೆಳಗಿಸಿದರು.ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷ ಪ್ರೊ.ಲl ಕೆ ರಂಗಯ್ಯ ಶೆಟ್ಟಿಗಾರ್ ,ವಲಯಾಧ್ಯಕ್ಷ ಕ್ಲಬ್ ನ ನಿಕಟಪೂರ್ವಾಧ್ಯಕ್ಷ‌ ಹಾಗೂ
ಲl ದಿಲೀಪ್ ಬಾಬ್ಲುಬೆಟ್ಟು, ಕಾರ್ಯದರ್ಶಿ ಲl ಮೋಹನ್ ದಾಸ್ ಕೂಟಾಜೆ, ಕೋಶಾಧಿಕಾರಿ ಲl ಸುರೇಶ್ ಕುಮಾರ್ ನಡ್ಕ, ನೂತನ ಕಾರ್ಯದರ್ಶಿ ಲl ಕರುಣಾಕರ ಎಣ್ಣೆಮಜಲು, ನೂತನ ಕೋಶಾಧಿಕಾರಿ ಲl ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಲಯನ್ಸ್ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಲl ಯಚ್ ಯಂ ತಾರಾನಾಥ್ , ವಲಯಾಧ್ಯಕ್ಷ ಲl ದಿಲೀಪ್ ಬಾಬ್ಲುಬೆಟ್ಟು ಜೊತೆಗೆ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ರವರನ್ನು ಸನ್ಮಾನಿಸಲಾಯಿತು.

ಸೇವಾ ಚಟುವಟಿಕೆಗಳು:ಎಸ್ ಎಸ್ ಎಲ್ ಸಿ ಯಲ್ಲಿ 616 ಅಂಕ ಪಡೆದ ಉತ್ತಮ್ ಕೆ ಕಣ್ಕಲ್ ರವರನ್ನು ಶೈಕ್ಷಣಿಕ ಸಾಧನೆಗೆ ಗೌರವಿಸಲಾಯಿತು. ಇತ್ತೀಚೆಗೆ ನಿಧನರಾದ ನವೀನ ಮೊಗ್ರ ರವರ ಕುಟುಂಬಕ್ಕೆ ಆರ್ಥಿಕ ನೆರವು. ‌ಮೊಗ್ರ ಶಾಲೆಗೆ ಪುಸ್ತಕ, ಸ್ಟೇಷನ್ನರಿ ವಿತರಣೆ. ನೇಲ್ಯಡ್ಕಶಾಲೆಗೆ ಸಮವಸ್ತ್ರಕ್ಕೆ ಆರ್ಥಿಕ ಸಹಕಾರ. ಪಡ್ಪಿನಂಗಡಿ ಶಾಲೆಯಲ್ಲಿ ಎಲ್ ಕೆ ಜಿ -ಯು ಕೆ ಜಿ ತರಗತಿ ಶೈಕ್ಷಣಿಕಕ್ಕೆ ಆರ್ಥಿಕ ಸಹಕಾರ ನೀಡಲಾಯಿತು. ಕ್ಲಬ್ ನ ಸದಸ್ಯರ ಮನೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು

ಕಾರ್ಯಕ್ರಮದಲ್ಲಿ ಲl ಶಶಿಧರ್ ಪಳಂಗಾಯ ಸ್ವಾಗತಿಸಿದರು. ವಂದಿಸಿದರು.‌ ಲl ಪುರಂದರ ಪನ್ಯಾಡಿ ಮತ್ತು ಲl ಶ್ರೀಮತಿ ಸುಶ್ಮಿತಾ ಜಾಕೆ ನಿರೂಪಿಸಿದರು.ಲl ವಾಸುದೇವ ಮೇಲ್ಪಾಡಿ ವಂದಿಸಿದರು.