ಕುಕ್ಕುಜಡ್ಕ: ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಇವಿಎಂ ಮೂಲಕ ವಿದ್ಯಾರ್ಥಿಗಳ ಮತದಾನ

0

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲೆಯ ಮತದಾನವನ್ನು
ಇವಿಎಂ ಮೂಲಕ ನಡೆಸಲಾಯಿತು. ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಧನುಷ್, ಕೌಶಿಕ್ ಪಿ, ಶ್ರವಣ್ ಪಿ ಎಂ ಮತ್ತು ವಿದ್ಯಾರ್ಥಿ ನಾಯಕಿ ಸ್ಥಾನಕ್ಕೆ ಅಹನ ಆನಂದ ಮೂಡೆಕಲ್ಲು, ಗ್ರೀಷ್ಮಾ ಬಿ ಎಸ್, ತೃಪ್ತಿ ನಾಮಪತ್ರ ಸಲ್ಲಿಸಿದರು.

ಮತದಾನದಲ್ಲಿ ವಿದ್ಯಾರ್ಥಿ ನಾಯಕನಾಗಿ ಕೌಶಿಕ್ ಪಿ ಮತ್ತು ವಿದ್ಯಾರ್ಥಿ ನಾಯಕಿಯಾಗಿ
ಗ್ರೀಷ್ಮಾ ಬಿ ಎಸ್ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಮಾಜ ಶಿಕ್ಷಕ ಹರಿಪ್ರಸಾದ ಕೆ, ಮುಖ್ಯಸ್ಥರಾಗಿ ಮುಖ್ಯೋಪಾಧ್ಯಾಯರಾದ ಸಂಕೀರ್ಣ ಎ ಎಲ್, ಮತಗಟ್ಟೆಅಧಿಕಾರಿಗಳಾಗಿ ಶ್ರೀಮತಿ ಸಂಧ್ಯಾಕುಮಾರಿ ಓ, ಶ್ರೀಮತಿ ಶೋಭಾ, ಶ್ರೀಮತಿ ಜಯಶ್ರೀ ಎಂ, ಮಿಥುನ್ ಕೆ ಸಹಕರಿಸಿದರು. ಎಲ್ಲಾ ವಿದ್ಯಾರ್ಥಿಗಳು ಇ.ವಿ.ಎಂ ಮೂಲಕ ಮತ ಚಲಾಯಿಸಿದರು.