ದಿನವೀಡಿ ಹುಡುಕಾಟ, ಪತ್ತೆಯಾಗದ ಕುರುಹು, ಶೋಧ ಸ್ಥಗಿತ
ನಾಳೆ ಮತ್ತೆ ಹುಡುಕಾಟ ಕಾರ್ಯ

ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಯೋಗಿ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ ಜು.22 ರಂದು ನಾಪತ್ತೆ ಆಗಿದ್ದು ಅಗ್ರಹಾರ ಬಳಿ ಕುಮಾರಧಾರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಜು.23 ರ ಬೆಳಗ್ಗೆಯಿಂದ ಎಸ್ ಡಿ..ಆರ್.ಎಫ್ ನಿಂದ ಶೋಧ ನಡೆದಿದೆ.
















ಅಪರಾಹ್ನದಿಂದ ಈಶ್ವರ ಮಲ್ಪೆ ತಂಡದಿಂದಲೂ ಹೊನ್ನಪ್ಪರ ಹುಡುಕಾಟ ನಡೆದಿದೆ. ಆದರೆ ಹೊನ್ನಪ್ಪ ಅವರ ಪತ್ತೆಯಾಗಿಲ್ಲ. ಇಂದಿಗೆ ಹುಡುಕಾಟ ಸ್ಥಗಿತಗೊಳಿಸಲಾಗಿದ್ದು ನಾಳೆ ಮತ್ತೆ ಹುಡುಕಾಟ ನಡೆಯಲಿರುವುದಾಗಿ ತಿಳಿದು ಬಂದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ಊಟದ ವ್ಯವಸ್ಥೆ ಇಂದು ಮಾಡಲಾಗಿತ್ತು, ಈಶ್ವರ ಮಲ್ಪೆ ಅವರು ಇಂದು ಸುಬ್ರಹ್ಮಣ್ಯದಲ್ಲಿ ತಂಗಿದ್ದು ನಾಳೆ ಮತ್ತೆ ಹುಡುಕಾಟ ನಡೆಸಲಿದ್ದಾರೆ, ಸುಳ್ಯದ ಅಗ್ನಿಶಾಮಕ ತಂಡವೂ ನಾಳೆ ಸೇರಿಕೊಳ್ಳಲಿರುವುದಾಗಿ ತಿಳಿದು ಬಂದಿದೆ.











