ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಬಿಸಿ ಟ್ರಸ್ಟ್ (ರಿ )ಸುಳ್ಯ ತಾಲೂಕು ಜಾಲ್ಸೂರು ವಲಯ ದುಗಲಡ್ಕ ಕನಕ ಮುತ್ತುಮಾರಿಯಮ್ಮ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ ಹಾಗೂ ಶ್ರೀ ಲಕ್ಷ್ಮಿ ಜ್ಞಾನ ವಿಕಾಸ ಕೇಂದ್ರಕ್ಕೆ ನೂತನ ಸಂಘಗಳ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಉದ್ಘಾಟನೆಯನ್ನು ಡಾ. ಚೈತ್ರಭಾನುರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಜ್ಞಾನ ವಿಕಾಸ ಕೇಂದ್ರದಿಂದ ಮಹಿಳೆಯರು ತನ್ನ ಅರೋಗ್ಯ, ಮಹಿಳೆರ ವಯೋಮಿತಿಯಲ್ಲಿ ಆಗುವಂತ ಬದಲಾವಣೆ ಇದರ ಬಗ್ಗೆ ಅರಿತು ಕೊಳ್ಳಲು ಒಂದು ಸೂಕ್ತ ವೇದಿಕೆ ಎಂದು ಜ್ಞಾನ ವಿಕಾಸ ಕಾರ್ಯಕ್ರಮದ ಬಗ್ಗೆ ಶ್ಲಾಘನಿಯ ವ್ಯಕ್ತಪಡಿಸಿದರು.
ಕ್ಷೇತ್ರ ಯೋಜನಾಧಿಕಾರಿಗಳಾದ ಮಾಧವ ಗೌಡರವರು ಮಾತನಾಡಿ, ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ &ವೈಯಕ್ತಿಕ ಶುಚಿತ್ವ, ಪರಿಸರ ಪ್ರಜ್ಞೆ, ಸ್ವ ಉದ್ಯೋಗ, ನಾಗರಿಕ ಸೌಲಭ್ಯ ಗಳ ಬಗ್ಗೆ ಬಳಕೆ ಮುಂತಾದ ಗುರಿಗಳನ್ನು ಇರಿಸಿಕೊಂಡು ಯೋಜನೆಯು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿಗಳಾದ ಶ್ರೀಮತಿ ಲಕ್ಷ್ಮಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.















ಅಮರಮುಡ್ನೂರು ಗ್ರಾ. ಪ. ಅಧ್ಯಕ್ಷರಾದ ಜಾನಕಿಯವರು ನೂತನ ಜ್ಞಾನ ವಿಕಾಸ ಕೇಂದ್ರಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜನ ಜಾಗೃತಿ ವೇದಿಕೆ ವಲಯ ಅಧ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಪೈಲಾರ್ ಒಕ್ಕೂಟ ಅಧ್ಯಕ್ಷರಾದ ದಯಾನಂದ ಗುಡ್ಡೆಮನೆ, ಸ. ಹಿ. ಪ್ರಾ. ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾರವರು ಉಪಸ್ಥಿತರಿದ್ದರು.
ಜಾಲ್ಸೂರು ವಲಯ ಮೇಲ್ವಿಚಾರಕರು ಶ್ರೀಮತಿ ಜಯಶ್ರೀಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಪೈಲಾರ್ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಚಂದ್ರಪ್ರಕಾಶ್ ಸ್ವಾಗತಿಸಿದರು.
ಶ್ರೀ ಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ಮನೋರಮ ವಂದಿಸಿದರು.










