ಪಂಜ ಲಯನ್ಸ್ ಕ್ಲಬ್ ವತಿಯಿಂದ ಜು.26 ರಂದು ಪಂಜ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲ.ನಾಗೇಶ್ ಕಿನ್ನಿಕುಮೇರಿ ಅವರ ಅಧ್ಯಕ್ಷೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು .
















ಭಾರತೀಯ ಸೇನೆಯ ಮಾಜಿ ಸೈನಿಕರಾದ ರಾಧಾಕೃಷ್ಣ ಕುಳ ಅವರನ್ನು ಮಾಜಿ ಪ್ರಾಂತೀಯ ಅಧ್ಯಕ್ಷರಾದ ಲ.ಮಾಧವ ಗೌಡ ಜಾಕೆ ಸನ್ಮಾನಿಸಿ ಅಭಿನಂದಿಸಿದರು. ವಲಯಾಧ್ಯಕ್ಷರಾದ ಲ. ದಿಲೀಪ್ ಬಾಬ್ಲುಬೆಟ್ಟು, ಹಿರಿಯ ಸದಸ್ಯರಾದ ಲ.ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ , ನಿಕಟಪೂರ್ವಅಧ್ಯಕ್ಷ ಲ.ಶಶಿಧರ ಪಳಂಗಾಯ , ಕೋಶಾಧಿಕಾರಿ ಲ. ವಾಸುದೇವ ಮೇಲ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಲ.ನಾಗೇಶ್ ಕಿನ್ನಿಕುಮೇರಿ ಸ್ವಾಗತಿಸಿ, ಕಾರ್ಯದರ್ಶಿಯಾದ ಲ.ಕರುಣಾಕರ ಎಣ್ಣೆಮಜಲು ವಂದಿಸಿದರು.











