ಪಂಜ: ಲ.ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ ರವರ ಜನ್ಮದಿನದ ಅಮೃತಾ ಮಹೋತ್ಸವ ಹಾಗೂ ಹುಟ್ಟುಹಬ್ಬ ಆಚರಣೆ

0

ಲಯನ್ಸ್ ಕ್ಲಬ್ ಪಂಜ ವತಿಯಿಂದ ಜು.26ರಂದು ಲಯನ್ಸ್ ಭವನದಲ್ಲಿ ಕ್ಲಬ್ ನ ಹಿರಿಯ ಸದಸ್ಯರಾಗಿರುವ ಲ.ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ MJF ಇವರ ಜನುಮ ದಿನದ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸಿ ಸನ್ಮಾನಿಸಲಾಯಿತು ಹಾಗೂ ಜುಲೈ ತಿಂಗಳಲ್ಲಿ ಜನಿಸಿದ ಲಯನ್ಸ್ ನ ಸದಸ್ಯರಿಗೆ ಜನ್ಮದಿನದ ಶುಭಾಶಯ ಕೋರಿ ಎಲ್ಲರಿಗೂ ಹಣ್ಣಿನ ಗಿಡವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಸದಸ್ಯರು, ಮಾರ್ಗದರ್ಶಕರು ಆಗಿರುವ ಲ.ಮಾಧವ ಗೌಡ ಜಾಕೆ MJF ಇವರು ಅಭಿನಂದನ ಭಾಷಣ ಮಾಡಿ ಎಲ್ಲರಿಗೂ ಶುಭಕೋರಿದರು. ಲ.ನಾಗೇಶ್ ಕಿನ್ನಿಕುಮೇರಿ ಸಭಾಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷರಾಗಿರುವ ಲ. ದಿಲೀಪ್ ಬಾಬ್ಲುಬೆಟ್ಟು ಅತಿಥಿಗಳಾಗಿ ಶುಭ ಹಾರೈಸಿದರು. ನಿಕಟ ಪೂರ್ವಾಧ್ಯಕ್ಷರಾದ ಲ.ಶಶಿಧರ ಪಳಂಗಾಯ ಸನ್ಮಾನ ಪತ್ರ ವಾಚಿಸಿದರು. ಕೋಶಾಧಿಕಾರಿ ಲ. ವಾಸುದೇವ ಮೇಲ್ಪಾಡಿ, ಕಾರ್ಯದರ್ಶಿ ಲ.ಕರುಣಾಕರ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ನ ಎಲ್ಲಾ ಸದಸ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.