Home Uncategorized ನಾಳೆ ಸುಳ್ಯ ಗೌಡರ ಸಂಘದ ವತಿಯಿಂದ 13 ನೇ ವರ್ಷದ ಆಟಿ ಸಂಭ್ರಮ

ನಾಳೆ ಸುಳ್ಯ ಗೌಡರ ಸಂಘದ ವತಿಯಿಂದ 13 ನೇ ವರ್ಷದ ಆಟಿ ಸಂಭ್ರಮ

0

ಸುಳ್ಯ ಗೌಡರ ಯುವ ಸೇವಾ ಸಂಘ ತಾಲೂಕು ಮಹಿಳಾ ಘಟಕ ಮತ್ತು ತರುಣ ಘಟಕ ಸುಳ್ಯ ನಗರ ಗೌಡ ಸಮಿತಿ ಮಹಿಳಾ ಘಟಕ ತರುಣ ಘಟಕದ ಆಶ್ರಯದಲ್ಲಿ ಈ ಬಾರಿ ೧೩ನೇ ವರ್ಷದ ಆಟಿ ಆಚರಣೆಯ ಸಂಭ್ರಮ ನಾಳೆ ಸುಳ್ಯದ ಕೋಡಿಯಾಲ ಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಲಿರುವುದು. ಸಮಾಜ ಬಾಂಧವರನ್ನು ಒಟ್ಟು ಸೇರಿಸಿಕೊಂಡು ಮಕ್ಕಳು ಮಹಿಳೆಯರು ಹಾಗೂ ಪುರುಷರು ಸೇರಿದಂತೆ ಎಲ್ಲಾ ವಯೋ ಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಆ ಮೂಲಕ ಈ ಬಾರಿಯ ಆಟಿ ಆಚರಣೆಯನ್ನು ನಡೆಯಲಿದೆ.


೧೩ನೇ ವರ್ಷದ ಆಟಿ ಆಚರಣೆಯನ್ನು ಈ ಬಾರಿ ನಾಟಿ ವೈದ್ಯರಾದ ಜನಾರ್ಧನ ಗೌಡ ಸೂಂತೋಡು ಮತ್ತು ಶ್ರೀಮತಿ ವಸಂತಿ ದಂಪತಿಯವರು ಉದ್ಘಾಟಿಸಲಿದ್ದಾರೆ.
ಯುವ ಸೇವಾ ಸಂಘದ ಅಧ್ಯಕ್ಷ ಪಿ. ಎಸ್. ಗಂಗಾಧರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ನ್ಯಾಯವಾದಿ ರಾಮಕೃಷ್ಣ ಅಮೈ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ವಯೋಮಾನದವರಿಗೆ ವಿವಿಧ ಸ್ಪರ್ಧೆ ಗಳನ್ನು ನಡೆಸಲಾಗುವುದು.


ಸಮಾರೊಪ ಸಮಾರಂಭ ದಲ್ಲಿ ಆಟಿ ತಿಂಗಳ ಮಹತ್ವದ ಕುರಿತು ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಚಂದ್ರಶೇಖರ ಪೇರಾಲು ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿ ಉಮೇಶ್ ಪಿ.ಕೆ, ವೆಂಕಟರಮಣ ಸೊಸೈಟಿ ಅಧ್ಯಕ್ಷ ಕೆ. ಸಿ ಸದಾನಂದ ರವರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೆತ್ರದಲ್ಲಿ ಸಾಧನೆ ಮಾಡಿದ ಡಾ. ಕೇಶವ ಸುಳ್ಳಿ, ಎಂ. ಡಿ ನಿರಂಜನ್,ನವೀತ್ ಕಂದಡ್ಕ, ಡಾ. ಅಭಿಜ್ಞಾ, ತಿಮ್ಮಪ್ಪ ಗೌಡ ನಾವೂರು, ಮಾಯಿಲಪ್ಪ ಗೌಡ ಸೂಂತೋಡು, ಕು. ಸೋನಾ ಅಡ್ಕಾರ್, ಕು. ಭೂಮಿಕಾ ಇವರುಗಳನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

NO COMMENTS

error: Content is protected !!
Breaking