ಕುಟುಂಬಸ್ಥರ ವತಿಯಿಂದ ಕಾರ್ಯಕ್ರಮದ ಆಯೋಜನೆ
ಶುಭ ಹಾರೈಸಿದ
ಬಂಧು ಮಿತ್ರರು, ಗಣ್ಯರು
ಮೊರಂಗಲ್ಲು ಮನೆತನದ ಹಿರಿಯರು, ಧೂಮಾವತಿ ಸಪರಿವಾರ ದೈವಸ್ಥಾನದ ಅಧ್ಯಕ್ಷರಾದ ಗುರುಪ್ರಸಾದ್ ರೈ ಯವರ 70 ನೇ ವರ್ಷದ ಹುಟ್ಟು ಹಬ್ಬ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಪುಷ್ಪಲತಾ ಜಿ. ರೈ ಯವರ 64 ರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು
ಅ. 3 ರಂದು ಅಲೆಟ್ಟಿಯ ಮೊರಂಗಲ್ಲು ತರವಾಡು ಮನೆಯಲ್ಲಿ ಆಚರಿಸಲಾಯಿತು.
ಮೊರಂಗಲ್ಲು ಕುಟುಂಬದ ಯಜಮಾನರಾದ ಉಮೇಶ್ ಶೆಟ್ಟಿಯವರು ಸೇರಿದಂತೆ ಕುಟುಂಬದ ಹಿರಿಯ, ಕಿರಿಯ ಸದಸ್ಯರೆಲ್ಲರೂ ಸೇರಿಕೊಂಡು ಗುರುಪ್ರಸಾದ್ ರೈ ಮತ್ತು ಶ್ರೀಮತಿ ಪುಷ್ಪಲತಾ ಜಿ. ರೈ ದಂಪತಿಯವರನ್ನು ಅದ್ದೂರಿಯಾಗಿ ವೇದಿಕೆಗೆ ಸ್ವಾಗತಿಸಿ ಕೇಕ್ ಕತ್ತರಿಸಿ
ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರ, ಬೈಲಿನವರ, ಗ್ರಾಮಸ್ಥರ ಹಾಗೂ ಬಂಧುಗಳ ಪರವಾಗಿ ಹಿರಿಯರಾದ ಶಿವರಾಮ ರೈ ಗುಂಡ್ಯ, ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ, ಕಿಶೋರ್ ಕುಮಾರ್ ಕೋಡಿಬೈಲು, ಅಶೋಕ ಪ್ರಭು ಸುಳ್ಯ,
ಪಿ.ಬಿ.ಸುಧಾಕರ ರೈ ಪೆರಾಜೆ,
ಎಂ. ಬಿ. ಸದಾಶಿವ, ಸುಧಾಮ ಅಲೆಟ್ಟಿ,
ಪ್ರವೀಣ್ ರೈ ಪುತ್ತೂರು, ಪ್ರಶಾಂತ್ ರೈ, ಪ್ರೀತಮ್ ಶೆಟ್ಟಿ ಅರಿಯಡ್ಕ, ರಾಧಾಕೃಷ್ಣ ರೈ ಅಲೆಟ್ಟಿಯವರುಗುರುಪ್ರಸಾದ್ ರೈ ಯವರ ಕುರಿತು ಗುಣ ಗಾನ ಮಾಡಿ ಶುಭ ಹಾರೈಸಿದರು.















ಮೊರಂಗಲ್ಲು ಬೈಲಿನವರ ಪರವಾಗಿ ಭಾರಿ ಗಾತ್ರದ ಹೂವಿನ ಹಾರವನ್ನು ದಂಪತಿಯವರಿಗೆ ಹಾಕಿ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿ
ಪರಿಸರದವರೆಲ್ಲರೂ ಒಟ್ಟಾಗಿ ಬಂದು
ಶುಭ ಹಾರೈಸಿದರು.
ಮೊರಂಗಲ್ಲು ಮಹಮ್ಮಾಯಿ ದೇವಸ್ಥಾನದ ವತಿಯಿಂದ ಬೆಳ್ತ ರವರ ನೇತೃತ್ವದಲ್ಲಿ ಕಾಲನಿಯ ಸಮಸ್ತರು
ಶುಭ ಹಾರೈಸಿದರು.
ಸುಳ್ಯದ ಪತ್ರಕರ್ತರ ಪರವಾಗಿಸುದ್ದಿ ಸಂಪಾದಕ ಹರೀಶ್ ಬಂಟ್ವಾಳ್ ನೇತೃತ್ವದಲ್ಲಿ ಪ್ರೆಸ್ ಕ್ಲಬ್ ವತಿಯಿಂದ ಶಾಲು, ಹಾರ ಹಾಕಿ ಶುಭಾಶಯ ಕೋರಲಾಯಿತು.ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಜೆ. ಕೆ. ರೈ, ಶಿವಪ್ರಸಾದ್ ಅಲೆಟ್ಟಿ ಜತೆಯಲ್ಲಿದ್ದರು.
ಶ್ರೀಮತಿ ಜಲಜಾಕ್ಷಿ ರೈ ಯವರ ನೇತೃತ್ವದಲ್ಲಿ
ಅಲೆಟ್ಟಿ ಕಸ್ತೂರಿ ಬಾ ಮಹಿಳಾ ಮಂಡಲದ ವತಿಯಿಂದ ಶುಭ ಹಾರೈಸಲಾಯಿತು.
ಆಗಮಿಸಿದ ಎಲ್ಲಾ ಹಿತೈಷಿ ಬಂಧು ಮಿತ್ರರು ವೈಯುಕ್ತಿಕ ವಾಗಿ ಹಾರಾರ್ಪಣೆ ಮಾಡಿ ಶುಭ ಹಾರೈಸಿದರು.
ಅಲೆಟ್ಟಿ ಗ್ರಾಮದ ಕುಂಚಡ್ಕ, ಕುಡೆಕಲ್ಲು, ಕೊಲ್ಚಾರ್, ಗುಂಡ್ಯ, ನಾರ್ಕೋಡು,
ಕಲ್ಲೆಂಬಿ, ಅರಂಬೂರು, ಪರಿವಾರ, ದೇವಸ್ಯ, ಪಡ್ಪು ಮನೆತದವರು ಹಾಗೂ ರೈ ಯವರ ಬಂಧು ಮಿತ್ರರು ಆಗಮಿಸಿ ಶುಭಾಶಯ ಕೋರಿದರು.

ಕು. ಥನಿಷಾ ಪಿ. ಶೆಟ್ಟಿ ಮತ್ತು ಕು. ಮೊನಾಲಿಕಾ ರೈ
ಪ್ರಾರ್ಥಿಸಿದರು.
ಮಾ| ಪರಮ್ ರೈ ಕೀಬೋರ್ಡ್ ನಲ್ಲಿ ಹಾಡು ಪ್ಲೇ ಮಾಡಿ ರಂಜಿಸಿದರು.
ಗಾಯಕ ಶಿವಪ್ರಸಾದ್ ಅಲೆಟ್ಟಿ ಶುಭಾಶಯ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮತಿ ಆಶಿತಾ ಪ್ರೀತಮ್ ಶೆಟ್ಟಿ ಮೊರಂಗಲ್ಲು, ಶ್ರೀಮತಿ ನೀಮಾ ಪ್ರಶಾಂತ್ ರೈ, ಆಶಿಕ್ ರೈ ಮೊರಂಗಲ್ಲು, ಕೇಶವ ಮೊರಂಗಲ್ಲು, ರಾಧಾಕೃಷ್ಣ ರೈ ಅಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕುಟುಂಬಸ್ಥರು ಆಯೋಜಿಸಿದ ಕಾರ್ಯಕ್ರಮದಲ್ಲಿ
ಕುಟುಂಬದ ಸದಸ್ಯರು ಹಾಗೂ ಬೈಲಿನವರು ಸಹಕರಿಸಿದರು.
ಆಗಮಿಸಿದ ಎಲ್ಲರಿಗೂ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.










