ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ ಆ.,8 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು.

ಕಲಶದೊಂದಿಗೆ ಆದಿಸುಬ್ರಹ್ಮಣ್ಯದಲ್ಲಿ ಹರಿಯುವ ದರ್ಪಣತೀರ್ಥ ನದಿಗೆ ತೆರಳಿದರು.ಅಲ್ಲಿ ನದಿಗೆ ಪೂಜೆ ನೆರವೇರಿಸಿದರು. ಬಳಿಕ ಕಲಶದಲ್ಲಿ ಗಂಗೆಯನ್ನು ತುಂಬಿಕೊಂಡು ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪಕ್ಕೆ ಬಂದು ಗಂಗೆಯನ್ನು ಪ್ರತಿಷ್ಠಾಪಿಸಿದರು.ನಂತರ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಪುರೋಹಿತರು ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು.


ಈ ಸಂದರ್ಭ ಸಮಿತಿಯ ಅಧ್ಯಕ್ಷೆ ಶೀಲಾ ಗಣೇಶ್, ಕಾರ್ಯದರ್ಶಿ ಸುಭಾಷಿಣಿ ಶಿವರಾಮ್, ಕೋಶಾಧಿಕಾರಿ ತ್ರಿವೇಣಿ ದಾಮ್ಲೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶೋಭಾ ನಲ್ಲೂರಾಯ, ವನಜಾ ಭಟ್, ಪೂಜಾ ಕಲ್ಲೂರಾಯ, ವಿಜಯಲಕ್ಷ್ಮೀ ಕಲ್ಲೂರಾಯ, ಲತಾ ಸರ್ವೇಶ್ವರ ಭಟ್, ಆಶಾ.ವಿ.ಶೆಣೈ, ಗಂಗಾದೇವಿ, ಸರ್ವಮಂಗಳ ಸೇರಿದಂತೆ ಸಮಿತಿ ಸದಸ್ಯರು ಮತ್ತು ಊರ ಪರವೂರ ಮಹಿಳೆಯರು ಉಪಸ್ಥಿತರಿದ್ದರು.