ಕೆ.ವಿ.ಜಿ ದಂತ ಮಹಾವಿದ್ಯಾಲಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

0

ಕೆ.ವಿ.ಜಿ ದಂತ ಮಹಾವಿದ್ಯಾಲಯದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸುಬೇದಾರ್ ಮೇಜರ್ ಜಿ. ತಿಮ್ಮಯ್ಯ ಅವರು ಧ್ವಜಾರೋಹಣ ಮಾಡುವುದರೊಂದಿಗೆ ಆ. ೧೫ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಯೋಧರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದೊಂದಿಗೆ ಗಳಿಸಿದ ಸ್ವಾತಂತ್ರ್ಯವನ್ನು ದೇಶದ ಒಳಿತಿಗಾಗಿ ಹಾಗೂ ಉನ್ನತಿಗಾಗಿ ಕರ್ತವ್ಯ ನಿರ್ವಹಿಸಿ ಭವ್ಯ ಭಾರತದ ಭವಿಷ್ಯಕ್ಕಾಗಿ ಶ್ರಮಿಸೋಣ ಎಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಡೆಂಟಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್. ಕುರುಂಜಿ ನೆರೆದವರನ್ನು ಉದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎ.ಓ.ಎಲ್.ಇ ಕಮಿಟಿ ಬಿ ಯ ಕಾರ್ಯದರ್ಶಿ ಡಾ. ಜ್ಯೋತಿ ಆರ್ ಪ್ರಸಾದ್, ನಿರ್ದೇಶಕಿ ಡಾ. ಅಭಿಜ್ಞಾ ಕೆ. ಆರ್., ಉಪ ಪ್ರಾಂಶುಪಾಲೆ ಡಾ. ಶೈಲಾ ಪೈ., ಆಡಳಿತಾಧಿಕಾರಿ ಮಾಧವ ಬಿ.ಟಿ., ಡೀನ್‌ಗಳಾದ ಡಾ. ಮನೋಜ್ ಕುಮಾರ್ ಎ.ಡಿ. ಮತ್ತು ಡಾ. ರೇವಂತ್ ಸೂಂತೋಡು, ಭವಾನಿ ಶಂಕರ ಅಡ್ತಲೆ, ಪ್ರಸನ್ನ ಕಲ್ಲಾಜೆ ಹಾಗೂ ವಿಭಾಗ ಮುಖ್ಯಸ್ಥರು, ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಗೌರವಿಸಲಾಯಿತು. ಸೇರಿದ ಸರ್ವರನ್ನೂ ಅಜ್ಮೀನಾ ಸ್ವಾಗತಿಸಿದರು. ಅತಿಥಿಗಳನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಹನ್ ಉಡುಪ ಪರಿಚಯಿಸಿದರು. ಸಾನಿಯಾ ವಂದನಾರ್ಪಣೆಗೈದರು ಹಾಗೂ ವರ್ಷ ಕಾರ್ಯಕ್ರಮವನ್ನು ನಿರೂಪಿಸಿದರು.