ಸ್ವಾತಂತ್ರ್ಯ ನಡಿಗೆ
ಸ.ಹಿ.ಪ್ರಾ. ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆ.15 ರಂದು ಆಚರಿಸಲಾಯಿತು.















ಎಸ್ .ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಗೀತಾ ದ್ವಜಾರೋಹಣ ಮಾಡಿದರು.
ಬಳಿಕ ಸಭಾ ಕಾರ್ಯಯ ನಡೆದಿದ್ದು ದತ್ತಿ ನಿಧಿ ವಿತರಿಸಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಗೀತಾ, ಹಳೆ ವಿದ್ಯಾರ್ಥಿ ಸಂಘದ ಚೆನ್ನಪ್ಪ ಕಜೆಮೂಲೆ, ಸ್ಥಳೀಯರಾದ ಸುಬ್ರಹ್ಮಣ್ಯ ಭಟ್ ಮುಂಡುಗಾರು, ಚಂದ್ರಶೇಖರ ಭಟ್, ಜಯಂತಿ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೋಹಿನಿ ಉಪಸ್ಥಿತರಿದ್ದರು. ಈ ಸಂದರ್ಭ ಏಳು ವರ್ಷಗಳ ಕಾಲ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದ ಗಂಗಾಧರ ತೋಟದಮೂಲೆ ಹಾಗೂ ಮಧುರಾ ತೋಟದ ಮೂಲೆ ದಂಪತಿಗಳನ್ನು ಗೌರವಿಸಲಾಯಿತು.
ಶಿಕ್ಷಕಿ ರೋಹಿಣಿ ಸಹಕರಿಸಿದರು. ಪೋಷಕರು ಉಪಸ್ಥಿತರಿದ್ದರು.










