ಜಟ್ಟಿಪಳ್ಳ ಮಸೀದಿ ಮತ್ತು ಮದರಸದಲ್ಲಿ ಸ್ವಾತಂತ್ರ್ಯತ್ಸೋವ ಆಚರಣೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

0

ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ವತಿಯಿಂದ ಬುಸ್ತಾನುಲ್ ಉಲೂಂ ಮದರಸದಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಂಭ್ರಮದಿಂದ ಆ.15 ರಂದು ಆಚರಿಸಲಾಯಿತು.

ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಬಿ ಎಂ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿದರು.
ಮದರಸ ಮುಖ್ಯ ಅಧ್ಯಾಪಕರಾದ ಅಬ್ದುಲ್‌ ಲತೀಫ್ ಸಖಾಫಿ ಗೂನಡ್ಕ ದುವಾಶಿರ್ವಚನ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಸ್ನರಣೆ ಮಾಡಿದರು. ಸಹ ಅದ್ಯಾಪಕ ಸಿರಾಜ್ ಸಹದಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸಮಿತಿ ಮದರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ ಶುಭ ಹಾರೈಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನವನ್ನು ಮಾಜಿ ಅಧ್ಯಕ್ಷರಾದ ಹಾಜಿ ವಿ ಕೆ ಅಬೂಭಕ್ಕರ್, ಬಶೀರ್ ಬಾಳಮಕ್ಕಿ, ನಿರ್ದೇಶಕ ಅಬ್ದುಲ್‌ ರಜಾಕ್ ಕೆ ಎಂ, ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನಿರ್ದೇಶಕ ತಾಜುದ್ದೀನ್ ಎಂ ಎಸ್ ದನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.