ಮುರುಳ್ಯ ಶಾಂತಿನಗರ ಶಾಲೆಯಲ್ಲಿ ಸ್ವಾತಂತ್ರ ದಿನೋತ್ಸವ

0

ಮುರುಳ್ಯ ಸ.ಹಿ.ಪ್ರಾ. ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ ದಿನವನ್ನು ವಿಶೇಷವಾಗಿ ಆಚಾರಿಸಲಾಯಿತು. ಬೆಳಿಗ್ಗೆ ಧ್ವಜರೋಹನ ನೇರವೇರಿಸಿ ಭಾರತ್ ಸ್ಕಟ್ ಗೈಡ್ಸ್ ವಿದ್ಯಾರ್ಥಿಗಳ ಶಿಸ್ತುಬದ್ಧ ಪಥ ಸಂಚಲನ ನೇರವೇರಿತು. ರಸ್ತೆಯುದ್ದಕ್ಕೂ ವರ್ತಕರು ಸಿಹಿತಿಂತಿ ಪಾನಿಯ ವಿತರಿಸಿದರು.


ಮೆರವಣಿಗೆಯ ಬಳಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದಿನೇಶ ನಡುಬೈಲುರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರದಲ್ಲಿ ಹಿರಿಯರಾದ ಶೇಷಪ್ಪ ಗೌಡ ಹುದೇರಿ, ಗ್ರಾ.ಪಂ ಅಧ್ಯಕ್ಷ ಶ್ರೀಮತಿ ವನಿತಾ ಸುವರ್ಣ, ಉಪಾಧ್ಯಕ್ಷೆ ಕುಮಾರಿ ಜಾನಕಿ ಮುರುಳ್ಯ, ಸದಸ್ಯರಾದ, ಮೋನಪ್ಪ ಗೌಡ ಅಲೇಕಿ, ಶ್ರೀಮತಿ ಶೀಲಾವತಿ ಗೋಳ್ತಿಲ, ಮಾಜಿ ಗ್ರಾ.ಪಂ. ಸದಸ್ಯ ಶೇಖರ ಸಾಲ್ಯನ್, ಹಿರಿಯ ಶಿಕ್ಷಕಿ ಉಷಾ ಹೇಮಲ, ಎಸ್‌.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಬೇಬಿ ಹೆದ್ದಾರಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಿಂದ ದೇಶಭಕ್ತಿಗೀತೆ, ಡ್ಯಾನ್ಸ್, ತ್ರಿವರ್ಣದ ಗೂಡುದೀಪ ಪ್ರದರ್ಶನ ನಡೆಯಿತು.
ಸಭೆಯಲ್ಲಿ ಏಣ್ಮೂರು ಕ್ಲಷ್ಟರ್ ನ ಜಯಂತ ಕಳತ್ತಜೆ, ಎಸ್.ಡಿ.ಎಂ.ಸಿ. ಸದಸ್ಯರು, ವಿದ್ಯಾರ್ಥಿಗಳು ಪೋಷಕರು, ಬಿಸಿಯೂಟ ಸಿಬ್ಬಂದಿಗಳು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು, ವಿದ್ಯಾಭಿಮಾನಿಗಳು ಹಾಜರಿದ್ದರು.


ಶಿಕ್ಷಕಿಯರಾದ ಹರ್ಷಿತ ಸ್ವಾಗತಿಸಿ, ಶಾಲಿನಿ ವಂದಿಸಿದರು. ಶಿಕ್ಷಕಿಯರಾದ ಶ್ರೀಮತಿ ಶಕುಂತಲ ಮತ್ತು ಶ್ರೀಮತಿ ಲಿಕ್ಷಿತ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಶಿಕ್ಷಕ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾಭಿಮಾನಿಗಳು ಕೊಟ್ಟ ಸಿಹಿತಿಂಡಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.