ವಿಶೇಷ ಆಕರ್ಷಣೆ- ಆಪರೇಷನ್ ಸಿಂದೂರ್ ಸಾಕ್ಷ್ಯ ಚಿತ್ರ ಪ್ರದರ್ಶನ
ಅಟ್ಟಿ ಮಡಕೆ ಒಡೆಯುವ ಸ್ಪರ್ಧೆ- ಪ್ರಥಮ ಹೆಚ್. ಟಿ. ಎಂ. ಸಿ, ದ್ವಿತೀಯ- ರೆಂಜಾಳ, ತೃತೀಯ- ಅನ್ನಪೂರ್ಣ
ಆಲೆಟ್ಟಿಯ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ, ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ 3 ನೇ ವರ್ಷದ ಆಲೆಟ್ಟಿ ಮೊಸರು ಕುಡಿಕೆ ಉತ್ಸವ ಆ. 17 ರಂದು ಅದ್ದೂರಿಯಾಗಿ ಜರುಗಿತು.
ಅಪರಾಹ್ನ ನಾಗಪಟ್ಟಣ ಸದಾಶಿವ ದೇವಸ್ಥಾನದ ಬಳಿಯಲ್ಲಿ ಮೊಸರು ಕುಡಿಕೆ ಉತ್ಸವದ ಅಟ್ಟಿ ಮಡಿಕೆ
ಒಡೆಯುವ ಸ್ಪರ್ಧೆಯ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು .
ನಾಗಪಟ್ಟಣ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ದಿನೇಶ್ ಕೋಲ್ಚಾರು ರವರು ತೆಂಗಿನಕಾಯಿ ಒಡೆಯುವ ಮೂಲಕ ಹಾಗೂ ಕೆವಿಜಿ ಆಯುರ್ವೇದ ಆಸ್ಪತ್ರೆ ಮತ್ತು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಲೀಲಾಧರ್ ಡಿ.ವಿ ಮಡಿಕೆ ಒಡೆದು ಶೋಭಾ ಯಾತ್ರೆಗೆ ಚಾಲನೆ ನೀಡಿ ಶುಭ ಹಾರೈಸಿದರು.

ಆಲೆಟ್ಟಿ ಸದಾಶಿವ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರ್ ಭಗವಧ್ವಜ ಹಾರಿಸಿದರು.
ಅಲೆಟ್ಟಿ ಸದಾಶಿವ ದೇವಸ್ಥಾನದ ದೇವಸ್ಥಾನ ವ್ಯ. ಸ. ಸಮಿತಿ ಪೂರ್ವಾಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಬಾಲಚಂದ್ರ ಅಡ್ಕಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಸತೀಶ್ ಕುಂಭಕೋಡು, ಅಚ್ಚುತ ಮಣಿಯಾಣಿ ಆಲೆಟ್ಟಿ,
ರಾಧಾಕೃಷ್ಣ ಕೋಲ್ಚಾರು, ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಜನನಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ, ಗೌರವಾಧ್ಯಕ್ಷ ಲತೀಶ್ ಗುಂಡ್ಯ,ಸುನಿಲ್ ಗುಂಡ್ಯ, ನಿತಿನ್ ಗುಂಡ್ಯ ಮತ್ತು ಪದಾಧಿಕಾರಿಗಳು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ,ನವೀನ್ ಬಾಂಜಿಕೋಡಿ ವಂದಿಸಿದರು.

ಶೋಭಾ ಯಾತ್ರೆಯ ಪಥ:
ನಾಗಪಟ್ಟಣ ಶಾಲೆಯ ಬಳಿ, ಮಿತ್ತಡ್ಕ ರೋಟರಿ ಶಾಲೆಯ ಎದುರು, ಮೊರಂಗಲ್ಲು ಧೂಮಾವತಿ ದ್ವಾರದ ಬಳಿಯಲ್ಲಿ, ನಾರ್ಕೋಡು ಸದಾಶಿವ ದ್ವಾರದ ಬಳಿ , ಕುಡೆಕಲ್ಲು ಮಹಾಮಾಯಿ ದೇವಸ್ಥಾನದ ಹತ್ತಿರ, ಕುಡೆಕಲ್ಲು ವಯನಾಟ್ ಕುಲವನ್ ದೈವಸ್ಥಾನದ ಎದುರು, ಆಲೆಟ್ಟಿ ಜಂಕ್ಷನ್ ನಲ್ಲಿ ಮತ್ತು ದೇವಸ್ಥಾನದ ಮುಂಭಾಗದಲ್ಲಿ ಅಟ್ಟಿ ಮಡಿಕೆ ಒಡೆಯುವ ಸಾಹಸಮಯ ಪ್ರದರ್ಶನವಾಯಿತು.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು. ವಿಶೇಷ ಆಕರ್ಷಣೆಯಾಗಿ ಭಾರತ ಮಾತೆಯ ಭಾವಚಿತ್ರದ ಅಲಂಕೃತ ವಾಹನ,
ನಾಸಿಕ್ ಬ್ಯಾಂಡ್, ಗೊಂಬೆಗಳು ಆಕರ್ಷಣೆಯವಾಗಿತ್ತು.















ಧಾರ್ಮಿಕ ಸಭೆ ಮತ್ತು ಆಪರೇಷನ್ ಸಿಂಧೂರ ಸಾಕ್ಷ್ಯ ಚಿತ್ರ ಪ್ರದರ್ಶನ :
ರಾತ್ರಿ ಸದಾಶಿವ ಸಭಾಭವನ ದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ನಿವೃತ್ತ ಯೋಧರಾದ ರಾಧಾಕೃಷ್ಣ ರೈ ಅಲೆಟ್ಟಿ ಯವರು ವಹಿಸಿದ್ದರು.
ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀಪತಿ ಬೈಪಡಿತ್ತಾಯ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ವಾಗ್ಮಿಗಳಾದ ನವೀನ್ ಸುಬ್ರಹ್ಮಣ್ಯ ರವರು ಮಾತನಾಡಿ “ನಮ್ಮ ನೆಲದ ಧರ್ಮದ ಉಳಿವಿಗೆ ಶ್ರೀ ಕೃಷ್ಣ ಪರಮಾತ್ಮ ನೀಡಿರುವ ಸಂದೇಶ ಸಾರುವ ಮೊಸರು ಕುಡಿಕೆ ಉತ್ಸವದಂತ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಹಿಂದೂ ಧರ್ಮದ ಪ್ರತಿಯೊಂದು ಹಬ್ಬ ಹರಿದಿನಗಳ ಆಚರಣೆಯ ಹಿಂದೆ ನಮ್ಮ ಸಮಾಜದ ಸಂಘಟನೆಯ ಉದ್ದೇಶ ಹಾಗೂ ಧಾರ್ಮಿಕತೆ ಮತ್ತು ದೇಶಭಕ್ತಿಯನ್ನು ಹುಟ್ಟಿಸುವ ಪ್ರೇರಣೆ ಆಗುತ್ತಿದೆ. ಆಪರೇಷನ್ ಸಿಂದೂರದ ಮೂಲಕ ಇಂದು ನಮ್ಮ ದೇಶ ಪ್ರಮುಖ ದೇಶಗಳ ಮಧ್ಯೆ ಎದ್ದು ನಿಲ್ಲುವಂತೆ ಮಾಡಿರುವುದು ಈ ನೆಲದ ಶಕ್ತಿಯನ್ನುತೋರಿಸಿಕೊಟ್ಟಿದೆ. ಪರಿಸರ ಮತ್ತು ಪ್ರಕೃತಿಯನ್ನು ಉಳಿಸಲು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಗೋವರ್ಧನ ಗಿರಿಯನ್ನು ಮೇಲೆತ್ತಿ ರಕ್ಷಿಸಿದಂತೆ ಆಡಳಿತ ನಡೆಸುವವರು
ಪ್ರಜೆಗಳ ಹಿತವನ್ನು ಮುಂದಿಟ್ಟುಕೊಂಡು ರಾಜ್ಯಭಾರ ಮಾಡಿದರೆ ದೇಶ ಸುಭಿಕ್ಷೆಯಾಗಿರಲು ಸಾಧ್ಯ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ
ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಹೇಮಂತ್ ಕಾಮತ್, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ,ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ, ದೇವಸ್ಥಾನದ ಆಡಳಿತ ಅಧಿಕಾರಿ ಶರತ್, ಪಿಡಬ್ಲ್ಯೂಡಿ ಗುತ್ತಿಗೆದಾರ ನಿತ್ಯಾನಂದ ಕುಡೆಂಬಿ, ಪ್ರಗತಿಪರ ಕೃಷಿಕರಾದ ಉದಯ ಕುಡೆಕಲ್ಲು, ಜನನಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸತೀಶ್ ಕುಲಾಲ್ ಆಲೆಟ್ಟಿ ವೇದಿಕೆಯಲ್ಲಿದ್ದರು
ಈ ಸಂದರ್ಭದಲ್ಲಿ ವಿಶೇಷವಾಗಿ ಆಪರೇಷನ್ ಸಿಂಧೂರ್ ಕುರಿತಾಗಿ ಸುಮಾರು 15 ನಿಮಿಷದ ಸಾಕ್ಷ್ಯ ಚಿತ್ರವನ್ನು ಎಲ್.ಇ.ಡಿ ಪರದ ಮೇಲೆ ಪ್ರದರ್ಶನ ಮಾಡಲಾಯಿತು
ಈ ಸಂದರ್ಭದಲ್ಲಿ ನಿವೃತ್ತ ಯೋಧರಾದ ಜನಾರ್ದನ ಗೌಡ ನಾರ್ಕೋಡು, ಶರತ್ ನಾರ್ಕೋಡು , ಗಂಗಾಧರ ಗೌಡ ಕಲ್ಲೆಂಬಿ ಉಪಸ್ಥಿತರಿದ್ದರು.
ಕು.ಪಲ್ಲವಿ ಆಲೆಟ್ಟಿ ಪ್ರಾರ್ಥಿಸಿ, ಧನಂಜಯ ಆಲೆಟ್ಟಿ ವೈಯಕ್ತಿಕ ಗೀತೆ ಹಾಡಿದರು.ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.
ಗೌರವಾಧ್ಯಕ್ಷ ಲತೀಶ್ ಗುಂಡ್ಯ ವಂದಿಸಿದರು. ನವೀನ್ ಬಾಂಜಿಕೋಡಿ ಮತ್ತು ಸುರೇಶ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯದರ್ಶಿ ಸುನಿಲ್ ಗುಂಡ್ಯ, ಜಗದೀಶ್ ಬಡ್ಡಡ್ಕ, ಕೋಶಾಧಿಕಾರಿ ನಾಗರಾಜ್ ಮೂಲೆಬಡ್ಡಡ್ಕ, ವಿನೋದ್ ಕುಮಾರ್ ಕುಡೆಕಲ್ಲು ಮತ್ತು ಸದಸ್ಯರು ಸಹಕರಿಸಿದರು.
ರಾತ್ರಿ ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಬಹುಮಾನ ವಿತರಣೆ:
ಬಹುಮಾನ ವಿತರಣಾ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ತಂಡಗಳಾದ ಪ್ರಥಮ ಸ್ಥಾನಿಯಾದ ಹೆಚ್. ಟಿ.ಎಂ ಸಿ, ಶಾಸ್ತಾವು ಯುವಕ ಮಂಡಲ ರೆಂಜಾಳ ದ್ವಿತೀಯ, ಅನ್ನಪೂರ್ಣ ಇಲೆಕ್ಟ್ರಿಕಲ್ಸ್ ತೃತೀಯ ಬಹುಮಾನ ನಗದು ಮತ್ತು ಶಾಶ್ವತ ಫಲಕ ಪಡೆದುಕೊಂಡರು. ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳಾದ ಯುವ ಕೇಸರಿ ಮುಳ್ಯ ಆಟ್ಲೂರು, ಯುವಶಕ್ತಿ ದಾಸರಬೈಲು, ವೀರ ಸಾವರ್ಕರ್ ಆರಂಬೂರು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಕರಿಕೆ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ರಾಧಾಕೃಷ್ಣ ರೈ ಅಲೆಟ್ಟಿ, ರಾಮಚಂದ್ರ ಅಲೆಟ್ಟಿ, ಸತೀಶ್ ಕುಲಾಲ್ ಅಲೆಟ್ಟಿ, ಶಿವಪ್ರಸಾದ್ ಅಲೆಟ್ಟಿ ಬಹುಮಾನ ವಿತರಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಶಶಿಧರ ಪರಿವಾರಕಾನ, ದಿನೇಶ್ ಆಲೆಟ್ಟಿ, ನವೀನ್ ಬಾಂಜಿಕೋಡಿ ಸಹಕರಿಸಿದರು.
ಜನನಿ ಫ್ರೆಂಡ್ಸ್ ಕಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ಕೇಸರಿ ಪಡೆಯ ಸ್ವಯಂಸೇವಕರಾಗಿ ರಕ್ಷಣ ಪಡೆಯವರಾಗಿಸಹಕರಿಸಿದರು.










