ಗೂನಡ್ಕ : ಚಲಿಸುತ್ತಿದ್ದ ಐರಾವತ ಬಸ್‌ನಿಂದ ಕಳಚಿ ಬಿದ್ದ ಸ್ಟೆಪಿನ್ ಟಯರ್

0

ಹಿಂದಿನಿಂದ ಬರುತ್ತಿದ್ದ ಕಾರಿಗೆ ತಾಗಿದ ಟಯರ್ – ಅಪಾಯದಿಂದ ಪಾರು

ಸರಣಿ ಅಪಘಾತ – ಬೈಕ್ ಸವಾರನಿಗೂ ಸಣ್ಣ ಪುಟ್ಟ ಗಾಯ

ಚಲಿಸುತ್ತಿದ್ದ ಐರಾವತ ಬಸ್‌ನಿಂದ ಸ್ಟೆಪಿನ್ ಟಯರ್ ಕಳಚಿ ಬಿದ್ದು, ಅದು ಹಿಂದಿನಿಂದ ಬರುತ್ತಿದ್ದ ಕಾರಿನ ಮೇಲೆಗೆ ತಾಗಿದ್ದು, ಕಾರಲ್ಲಿದವದರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಇಂದು ಗೂನಡ್ಕದಿಂದ ವರದಿಯಾಗಿದೆ.


ಸುಳ್ಯ ಕಡೆಯಿಂದ ಮಡಿಕೇರಿಗೆ ಹೋಗುತ್ತಿದ್ದ ಐರಾವತ ಬಸ್‌ನ ಸ್ಟೆಪಿನ್ ಟಯರ್ ಗೂನಡ್ಕ ಮಸೀದಿ ಬಳಿ ಕಳಚಿ ಬಿದ್ದಿದ್ದು, ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಕಾರಿಗೆ ಟಯರ್ ತಾಗಿ ಬಿತ್ತು. ಆ ಕಾರಿನ ಹಿಂಬದಿಯಲ್ಲಿ ಮತ್ತೊಂದು ಕಾರು ಹಾಗೂ ಬೈಕ್ ಬರುತ್ತಿದ್ದು, ಅವರು ಕೂಡಾ ಸಡನ್ ಬ್ರೇಕ್ ಹಾಕಿದ ಕಾರಣ ವಾಹನಗಳು ಸರಣಿ ಅಪಘಾತವಾಯಿತು. ಬೈಕ್ ಸವಾರ ಚಿದಾನಂದ ಮಾಸ್ತರ್‌ರವರ ಕೈ ಬೆರಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.